logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಲಗ್ನಕಾಲ
1. ಶುಭಮುಹೂರ್ತ. 2. ಮದುವೆಯ ಸಮಯ.

ಲಗ್ನಪತ್ರಿಕೆ
1. ಮದುವೆ, ಮುಂಜಿ ಮುಂತಾದ ಶುಭಕಾರ್ಯಗಳಿಗೆ ಆಮಂತ್ರಿಸುವ ಪತ್ರ,- ಕರೆಯೋಲೆ. 2. ಮದುವೆಯ ದಿನ, ಮುಹೂರ್ತಗಳನ್ನು ನಿಶ್ಚಯಿಸಿ ಕರೆಯೋಲೆಗಳನ್ನು ಸಿದ್ಧಪಡಿಸುವ ಸಮಾರಂಭ.

ಲಗ್ನವಾಗು
ಮದುವೆಯಾಗು.

ಲಗ್ನಾಧಿಪತಿ
(ಜ್ಯೋತಿಶ್ಶಾಸ್ತ್ರದಂತೆ) ಆಯಾ ರಾಶಿಗೆ ಮುಖ್ಯಸ್ಥಾನದಲ್ಲಿರುವ ಗ್ರಹ.

ಲಗ್ನಿಗ
ಮದುವೆ, ಮುಂಜಿ ಮೊದಲಾದ ಶುಭಕಾರ್ಯಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ಹೇಳುವವನು.

ಲಗ್ನಿಸು
ಬೆರೆ.

ಲಂಘಕ
ಲಂಗಿಗ.

ಲಂಘನ
1. ಹಾರುವಿಕೆ. 2. ಕುದುರೆಯ ಒಂದು ಬಗೆಯ ಓಟ. 3. ಮಿತಿಯನ್ನು ಮೀರುವುದು. 4. ಹತ್ತುವುದು. 5. ಉಪವಾಸ.

ಲಘಿಮ
ವಿಚಾರಶೂನ್ಯನಾದವನು.

ಲಘಿಮೆ
1. ಅಣಿಮೆ, ಮಹಿಮೆ, ಗರಿಮೆ, ಲಘಿಮೆ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ ಮತ್ತು ವಶಿತ್ವ ಎಂಬ ಎಂಟು ಬಗೆಯ ಸಿದ್ಧಿಗಳಲ್ಲಿ ಒಂದು. 2. ಹಗುರವಾಗಿರುವಿಕೆ,- ಭಾರವಿಲ್ಲದಿರುವಿಕೆ.


logo