logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಲಂಬ
1. ಜೋಲುವ. 2. ದೊಡ್ಡದಾದ. 3. ಉದ್ದವಾದ.

ಲಂಬಕ
1. ಒಂದು ಬಗೆಯ ಆಭರಣ. 2. ಗ್ರಂಥದ ಅಧ್ಯಾಯ,- ಪ್ರಕರಣ.

ಲಂಬಣ
1. ಉದ್ದವಾದ ಒಂದು ಬಗೆಯ ಮರ. 2. ಕುಚ್ಚು.

ಲಂಬಣಿ(ಳಿ)ಗೆ
ಉದ್ದವಾದ ಸರ.

ಲಂಬನ
1. ಜೋಲಾಡುವುದು. 2. ಉದ್ದವಾದ ಒಂದು ಬಗೆಯಸರ.

ಲಂಬಳ
1. ಲಂಪಣ. 2. ವಿಷಯಾಸಕ್ತಿ. 3. ಲಂಬಣ.

ಲಂಬಾಣಿ
ಒಂದು ಅಲೆಮಾರಿ ಜನಾಂಗ ಮತ್ತು ಆ ಜನಾಂಗಕ್ಕೆ ಸೇರಿದ ವ್ಯಕ್ತಿ.

ಲಂಬಿಕೆ
1. ನೇತಾಡುವುದು. 2. ಕಿರುನಾಲಗೆ. 3. ಕಿವಿಯಹಾಲೆ.

ಲಂಬಿಸು
1. ತೂಗಾಡು. 2. ಹೆಚ್ಚು. 3. ದೊಡ್ಡದನ್ನಾಗಿ ಮಾಡು. 4. ಮೈಚಾಚು.

ಲಂಬು
1. ಉದ್ದಳತೆ. 2. ಎತ್ತರವಾಗಿರುವ ವ್ಯಕ್ತಿ.


logo