logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಲತೆ
1. ಬಳ್ಳಿ. 2. ಕೊಂಬೆ.

ಲತೆಯಿಱೆ
(ಎಲೆಯಂತೆ) ತೆಳ್ಳಗೆ ಒತ್ತು,- ಲಟ್ಟಿಸು.

ಲತೆವನೆ
ಲತಾಗೃಹ.

ಲತ್ತೆ
ಹೊಡೆತ.

ಲಂದಣಗಿತ್ತಿ
ಅಡುಗೆಯನ್ನು ಮಾಡುವ ಹೆಂಗಸು.

ಲಂದಣಿಗ
ಅಡುಗೆಯ ಕೆಲಸವನ್ನು ಮಾಡುವವನು.

ಲದ್ದಿ
ಆನೆ, ಕುದುರೆ ಮುಂತಾದ ಪ್ರಾಣಿಗಳ ಮಲ.

ಲದ್ದೆ
ಹೊರೆ.

ಲಂಪಟ
1. ಯಾವುದಾದರೊಂದು ಚಟವುಳ್ಳವನು,- ಗೀಳು ಹಿಡಿದವನು. 2. ಕಾಮಾಸಕ್ತ. 3. ಗೀಳು.

ಲಂಪಟತೆ
ವಿಷಯಲೋಲುಪತೆ.


logo