logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ರಯ್ಯ
ಅಂದವಾದುದು.

ರಯ್ಯನೆ
ವೇಗವಾಗಿ.

ರವ
ಧ್ವನಿ.

ರವ(ವಿ)ಕೆ
(ಹೆಂಗಸರ) ಕುಪ್ಪಸ.

ರವಂಗುಡು
ಧ್ವನಿಮಾಡು.

ರವಣ
1. ಹಣ. 2. ಜೂಜಿನಲ್ಲಿ ಒಡ್ಡುವ ಹಣ. 3. ಕೋಗಿಲೆ. 4. ಒಂಟೆ.

ರವಣ
1. ಅಳುವ. 2. ಹಾಸ್ಯಕರವಾದ. 3. ಚಂಚಲವಾದ.

ರವಣಿ
1. (ವಾದ್ಯ ಮುಂತಾದುವುಗಳ) ಧ್ವನಿ. 2. ಅಬ್ಬರ.

ರವದಿ(ದೆ)
ಜೋಳ ಮೊದಲಾದುವುಗಳ ಒಣಗಿದ ಗರಿ.

ರವಳಿ
1. (ವಾದ್ಯ ಮುಂತಾದುವುಗಳ) ಧ್ವನಿ. 2. ಒಂದು ಬಗೆಯ ರಣವಾದ್ಯ.


logo