logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ರಾಗ
1. ಬಣ್ಣ. 2. ಕೆಂಪುಬಣ್ಣ. 3. ಒಲುಮೆ. 4. ಹಿಗ್ಗು. 5. (ಸಂಗೀತದಲ್ಲಿ) ಇಂಪಾಗುವಂತೆ ಹೊಂದಿಸಿದ ಸ್ವರಗಳ ಮೇಳೈಕೆ.

ರಾಗಗೆಡು
ಸಂತೋಷವಿಲ್ಲವಾಗು.

ರಾಗತೆಗೆ
1. ಅಳು. 2. ಅಪಸ್ವರ ನುಡಿ. 3. ನೆವ ತೆಗೆ.

ರಾಗಂಬೆಱು
ಪ್ರೀತಿಯನ್ನು ಹೊಂದು.

ರಾಗಾಲಾಪನೆ
ನಿರ್ದಿಷ್ಟರಾಗವನ್ನು ಸಾಹಿತ್ಯವಿಲ್ಲದೆ ವಿಸ್ತಾರವಾಗಿ ಹಾಡುವುದು.

ರಾಗಾವಿಲ
ಅತಿಯಾದ ಮೋಹಕ್ಕೆ ಒಳಗಾದ.

ರಾಗಾವಿಲ
1. ಅತಿಮೋಹಕ್ಕೆ ಒಳಗಾದುದು. 2. ಮೋಹಕ್ಕೆ ಒಳಗಾದ ವ್ಯಕ್ತಿ.

ರಾಗಾವಿಳ
1. ಕೆಂಪುಬಣ್ಣದಿಂದ ಕೂಡಿ ದವನು. 2. ಮೋಹಕ್ಕೆ ಒಳಗಾದ ವ್ಯಕ್ತಿ.

ರಾಗಿ
1. ಒಂದು ಬಗೆಯ ಏಕದಳ ಧಾನ್ಯ. 2. ಕೆಂಪುಬಣ್ಣ,. 3. ಅನುರಕ್ತ. 4. ವಿಷಯಾಸಕ್ತ.

ರಾಗಿಕಲ್ಲು
(ರಾಗಿ ಮುಂತಾದ ಧಾನ್ಯಗಳನ್ನು) ಬೀಸಿ ಹಿಟ್ಟುಮಾಡುವ ಕಲ್ಲು.


logo