logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ರಹಿತ
ಬಿಡುವಿಕೆ.

ರಹಿತ
ಇಲ್ಲದ.

ರಾಕ(ಗ)ಟೆ
ತಲೆಯಲ್ಲಿ ಧರಿಸುವ ಒಂದು ಬಗೆಯ ಆಭರಣ.

ರಾಕೆ
1. ಪೂರ್ಣಚಂದ್ರನಿರುವ ದಿನ. 2. ಮೊದಲನೆಯ ಬಾರಿ ಋತುಮತಿಯಾದವಳು.

ರಾಕೇಂದು
ಪೂರ್ಣಚಂದ್ರ.

ರಾಕ್ಷಸ
1. ದೇವತೆಗಳ ಶತ್ರು. 2. ನೈರುತ್ಯದಿಕ್ಕಿನ ಅಧಿಪತಿ. 3. ಕ್ರೂರನಾಗಿರುವವನು. 4. ಅರುವತ್ತುಸಂವತ್ಸರಗಳಲ್ಲಿ ಐವತ್ತನೆಯದು.

ರಾಕ್ಷಸಗಣ
(ಜ್ಯೋತಿಷ್ಯದಲ್ಲಿ) ನಕ್ಷತ್ರಗಳ ಮೂರು ಗಣಗಳಲ್ಲಿ ಒಂದು.

ರಾಕ್ಷಸವಿವಾಹ
ಎಂಟು ಬಗೆಯ ವಿವಾಹ ಗಳಲ್ಲಿ ಒಂದು.

ರಾಕ್ಷಸಿ
1. ರಾಕ್ಷಸರ ಹೆಣ್ಣು. 2. ಕ್ರೂರ ಹೆಂಗಸು. 3. ಒಂದು ಬಗೆಯ ಸಸ್ಯ.

ರಾಖಿ
(ಶ್ರಾವಣ ಶುದ್ಧ ಪೌರ್ಣಿಮೆಯಂದು) ಹೆಣ್ಣುಮಕ್ಕಳು ಸೋದರತ್ವದ ಸಂಕೇತವಾಗಿ ಸೋದರ ಅಥವಾ ಸೋದರ ಸಮಾನರ ಕೈಗೆ ಕಟ್ಟುವ ರೇಷ್ಮೆಯ ದಾರ.


logo