logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ರಸಾಂಜನ
1. ಔಷಧವಾಗಿ ಬಳಕೆಯಾಗುವ ಒಂದು ಧಾತು. 2. ಕಣ್ಕಪ್ಪು.

ರಸಾತಲ
ಭೂಮಿಯ ಕೆಳಗಿರುವುದೆಂದು ಭಾವಿಸಲಾದ ಏಳು ಲೋಕಗಳಲ್ಲಿ ಒಂದು.

ರಸಾನುಭವ
(ನವರಸಗಳಲ್ಲಿ ಯಾವು ದಾದರೂ) ರಸವನ್ನು ಅನುಭವಿಸುವಿಕೆ.

ರಸಾಭಾಸ
ಕಾವ್ಯಗಳಲ್ಲಿ ಬರುವ ಅನೌಚಿತ್ಯ ಸನ್ನಿವೇಶ.

ರಸಾಯನ
1. ಹಿತವಾದುದು. 2. ಮಧುರವಾದಪೇಯ. 3. ಸಿಹಿ, ಖಾರ ಮೊದಲಾದ ಆರು ರಸಗಳ ಮಿಶ್ರಣ. 4. ಬಾಳೆಹಣ್ಣು ಬೆಲ್ಲ ಸೇರಿಸಿ ಮಾಡುವ ಒಂದು ಬಗೆಯ ಸಿಹಿಖಾದ್ಯ. 5. ರಸವಾದ. 6. ಒಂದು ಬಗೆಯ ಪಾಕ.

ರಸಾಯನವಿಜ್ಞಾನ
ಮೂಲಧಾತುಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಿಷಯ ಗಳನ್ನು ತಿಳಿಸುವ ಶಾಸ್ತ್ರ.

ರಸಾಯನಶಾಸ್ತ್ರ
ರಸಾಯನವಿಜ್ಞಾನ.

ರಸಾರುಹ
ಭೂಮಿಯಲ್ಲಿ ಹುಟ್ಟಿದುದು.

ರಸಾಲ
1. ಮಾವು. 2. ರಸದಾಳಿ ಕಬ್ಬು.

ರಸಾಲ
ಸವಿಯಾದ.


logo