logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಜಗಲ
1. ಕಪಟಿ. 2. ಮದ್ಯವನ್ನು ತಯಾರಿಸಲು ಅನುಗೊಳಿಸಿದ ನಾನಾ ಪದಾರ್ಥಗಳಿಂದಾದ ಮುದ್ದೆ. 3. ಮಗ್ಗಾರೆಗಿಡ. 4. ಯುದ್ಧ ಕವಚ. 5. ಸಗಣಿ.

ಜಂಗಲಿ
ಅರಣ್ಯಕ್ಕೆ ಸಂಬಂಧಿಸಿದ.

ಜಗಲಿ
1. ಕಟ್ಟೆ. 2. ವಿಗ್ರಹದ ಪೀಠ.

ಜಂಗಲು
ಕಾಡು.

ಜಂಗಲ್
1. ಜೋಡು ದೋಣಿ,- ತೆಪ್ಪ. 2. ಕಾಡು.

ಜಂಗಳ
1. ಬಿಗಿಯಿಲ್ಲದುದು. 2. ಸುರಿಯುವಿಕೆ.

ಜಗಳ
ಕಲಹ.

ಜಗಳಗಂಟ
ಕಲಹ ಮಾಡುವ ಸ್ವಭಾವದವನು.

ಜಗಳಗಂಟಿ
1. ಕಲಹಮಾಡುವ ಸ್ವಭಾವದವಳು. 2. ಜಗಳಗಂಟ.

ಜಗಳಗಂಟಿ
ಕಲಹವಾಡುವ ಸ್ವಭಾವದ.


logo