logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಚಕ್ಕಲ(ಳ)ಗುಳಿ
ಪಕ್ಕೆಗಳಲ್ಲಿ ಬೆರಳಾಡಿಸಿ ನಗಿಸುವ ಕ್ರಿಯೆ.

ಚಕ್ಕಲುಬಕ್ಕಲು
ಚಕ್ಕಂಬಟ್ಟಲು.

ಚಕ್ಕವಕ್ಕಿ
ಚಕ್ರವಾಕ ಪಕ್ಷಿ.

ಚಕ್ಕವತ್ತ
ಒಂದು ಬಗೆಯ ತರಕಾರಿಸೊಪ್ಪು.

ಚಕ್ಕಳ
1. ತೊಗಲು. 2. ಗಾಯ ಮಾಯುವಾಗ ಮೇಲೇಳುವ ಹಕ್ಕಳೆ. 3. ಸಣ್ಣ ಚಾಪೆ. 4. ಒಂದು ಬಗೆಯ ಪಾತ್ರೆ.

ಚಕ್ಕಳಬಕ್ಕಳ
ಚಕ್ಕಂಬಟ್ಟಲು.

ಚಕ್ಕಳಿಗುಳಿ
ಚಕ್ಕಲಗುಳಿ.

ಚಕ್ಕೞಿ
ಚಪ್ಪಟೆಯಾಗು.

ಚಕ್ಕು
ಬ್ಯಾಂಕಿನಲ್ಲಿ ಠೇವಣಿದಾರನು ತನ್ನ ಹೆಸರಿಗಿರುವ ಹಣದಲ್ಲಿ ಇಂತಿಷ್ಟನ್ನು ಇಂಥವರಿಗೆ ಕೊಡಬೇಕೆಂದು ಬರೆದುಕೊಡುವ ಅಧಿಕಾರಯುಕ್ತವಾದ ಪತ್ರ.

ಚಕ್ಕುಬಂದಿ
ಚಕಬಂದಿ.


logo