logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಚತ್ವರ
1. ಚೌಕಾಕಾರವಾದ ಅಂಗಳ. 2. ಯಜ್ಞಕ್ಕಾಗಿ ಸಮತಟ್ಟು ಮಾಡಿದ ನೆಲ. 3. ಹಲವು ದಾರಿಗಳು ಕೂಡುವ ಸ್ಥಳ.

ಚಂದ
1. ಅಂದ. 2. ಹೋಲಿಕೆ. 3. ರೀತಿ. 4. ಸರಿಯಾದುದು. 5. ಕ್ಷೇಮ. 6. ಚಂದ್ರ. 7. ಛಂದಸ್ಸು.

ಚಂದಣ
ಶ್ರೀಗಂಧದ ಮರ.

ಚಂದನ
1. ಚಂದಣ. 2. ಶ್ರೀಗಂಧದ ಕೊರಡನ್ನು ತೇದು ಮಾಡಿದ ಗಂಧ,- ಕಲ್ಕ.

ಚಂದನಾಚಲ
ಗಂಧದ ಮರಗಳು ಹೇರಳವಾಗಿ ಬೆಳೆಯುವ ಬೆಟ್ಟ.

ಚಂದನೋಪಲ
ಗಂಧತೇಯುವ ಕಲ್ಲು.

ಚಂದಮ(ವ)
ಚಂದ್ರಮ.

ಚಂದಮಾಮ
(ಮಕ್ಕಳ ಭಾಷೆಯಲ್ಲಿ) ಚಂದ್ರನನ್ನು ಅಕ್ಕರೆಯಿಂದ ಸಂಬೋಧಿಸುವ ಹೆಸರು.

ಚದರ
ಚಚ್ಚೌಕ.

ಚದರಡಿ
ಒಂದು ಅಡಿ ಉದ್ದ ಹಾಗೂ ಒಂದು ಅಡಿ ಅಗಲವಾಗಿರುವುದು.


logo