logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಋಜುತ್ವ
ನೇರವಾಗಿರುವ ಗುಣ.

ಋಜುಮಾರ್ಗ
1. ನೇರವಾದ ದಾರಿ. 2. ಸರಳ ಸ್ವಭಾವ.

ಋಜುರೋಹಿತ
1. ಇಂದ್ರನ ಧನುಸ್ಸು. 2. ಕಾಮನ ಬಿಲ್ಲು.

ಋಣ
1. ಸಾಲ. 2. ಕೋಟೆ. 3. ನೀರು. 4. ಹಂಗು. 5. ಉಪಕಾರ.

ಋಣಚಿಹ್ನೆ
(ಗಣಿತದಲ್ಲಿ) ಕಳೆಯಬೇಕಾದುದನ್ನು ಸೂಚಿಸುವ ಚಿಹ್ನೆ (-).

ಋಣತ್ರಯ
ದೇವಋಣ, ಪಿತೃಋಣ, ಋಷಿಋಣ ಎಂಬ ಮೂರು ಬಗೆಯ ಋಣಗಳು.

ಋಣನಿಧಾನ
ತನಗೆ ಲಭ್ಯವಾಗ ಬೇಕಾಗಿರುವ ನಿಕ್ಷೇಪ.

ಋಣಮುಕ್ತ
ಋಣ ಅಥವಾ ಸಾಲದಿಂದ ಬಿಡುಗಡೆಯಾದವನು.

ಋಣಹರಿ
ಸಾಲ ತೀರಿಹೋಗು.

ಋಣಾನುಬಂಧ
ಪೂರ್ವಜನ್ಮದ ಋಣ ಸಂಬಂಧ,- ಸ್ನೇಹಸಂಬಂಧ.


logo