logo
भारतवाणी
bharatavani  
logo
Knowledge through Indian Languages
Bharatavani

Sankshipta Kannada Nighantu (Kannada Sahitya Parishattu)

ಅಂಕಣಬರಹ
ಪತ್ರಿಕೆಗಳಲ್ಲಿ ಬರೆಯುವ ನಿಯತವಾದ ನಿರ್ದಿಷ್ಟ ಲೇಖನ.

ಅಂಕಣಿ
ಕುದುರೆಯ ರಿಕಾಪು.

ಅಂಕನ
1. ಗುರುತು ಮಾಡುವುದು. 2. ಬರೆ ಹಾಕುವುದು - ಎಳೆಯುವುದು.

ಅಂಕಪಟ್ಟಿ
ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಪಡೆದ ಅಂಕಗಳನ್ನು ನಮೂದಿಸಿರುವ ಪಟ್ಟಿ.

ಅಂಕಪರದೆ
ನಾಟಕದ ಅಂಕದ ಕೊನೆಯಲ್ಲಿ ಬಿಡುವ ತೆರೆ.

ಅಂಕಮಾಲೆ
ಬಿರುದುಗಳುಳ್ಳ ಮಾಲೆ.

ಅಕರಾಳವಿಕರಾಳ
ಘೋರವಾದ.

ಅಕಲಂ(ಳಂ)ಕ
ನಿರ್ಮಲವಾದ.

ಅಂಕಲಿಪಿ
1. ಅಂಕಿಗಳನ್ನೂ ಅಕ್ಷರಗಳನ್ನೂ ಕಲಿಸುವ ಪುಸ್ತಕ. 2. ಅಂಕೆಗಳನ್ನು ಬಳಸಿ ಬರೆಯುವ ಬರಹ.

ಅಕಲ್ಪಿತ
ಕಲ್ಪಿತವಲ್ಲದ.


logo