logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Vase
Ceramic ware a vessel.
ಹೂಕುಂಡ, ಪುಪ್ಪದಾನಿ, ಹೂಗಳನ್ನು ಜೋಡಿಸಿ ಅಲಂಕಾರಗೊಳಿಸುವುದಕ್ಕಾಗಿ ಬಳಸುವ ಮಣ್ಣಿನ ಪಾತ್ರೆ, ಗಾಜಿನ, ಪಿಂಗಾಣಿಯ ಕುಂಡ.

Vessel
Chatty, teapot, flowerpot kettle, vase, jug, water and wine pot. Empty vessel makes much noise (prv)
ಮಣ್ಣಿನ ಪಾತ್ರೆ ಭಾಂಡ, ಹೂಜಿ, ನೀರಿನ ಪಾತ್ರೆ, ಮಧ್ಯದ ಪಾತ್ರೆ, ಹೂಕುಂಡ

Vinegar
A sour liquid obtained from wine clider.
ಹುಳಿ ರಸ, ವಿಶೇಮಣ್ಣಿನ ಶಿಲ್ಪ ಮಾಡುವ ಮಣ್ಣಿಗೆ ಬೆರಸುವದು.

Vitreous
Glass like.
ಗಾಜಿನಂತಹ ಮೈಉಳ್ಳದ್ದು.

Vitrify
To heat to hard glass to convert or to be converted.
ಕಾವಿನಿಂದ ಗಾಜಿನಂಥ ವಸ್ತುಗಳನ್ನು ಕರಗಿಸಿ ಕುಂಭವಸ್ತುಗಳಿಗೆ ಗಾಜುಮೈ ಭರಿಸುವುದು.

Votive
Offered or dedicated in fulfilment of vow.
ಹರಕೆಯ ಮುಡುಪಿನ ದೇವರಿಗೆ ಒಪ್ಪಿಸುವುದು. ಹರಕೆ ಒಪ್ಪಿಸುವ ವಿಧಿಗೆ ಪ್ರತ್ಯೇಕವಾದ ಮಡಕೆ ಮಾಡುವರು, ತಮಿಳಿನಾಡಿನಲ್ಲಿ ಬೆಳೆ ಸಮೃದ್ಧಿಬರಲೆಂದು ರೋಗರುಜಿನ ಬಾರದಿರಲೆಂದು ಮಣ್ಣಿನ ಕುದುರೆಯನ್ನು ಹೊಲದಲ್ಲಿಡುವರು, ಬೇರೆ, ಬೇರೆ, ಮಣ್ಣಿನ ಹರಕೆ ಮೂರುತಿ ಮಾಡುವ ಪದ್ಧತಿ ನಮ್ಮ ರಾಜ್ಯದಲ್ಲೂ ಇದೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಕುಂಬಾರರು ಮಣ್ಣಿನ ವಿವಿಧ ಬಗೆಯ ಹರಕೆ ಮೂರುತಿ ಮಾಡುವರು. ಹರಕೆ ಒಪ್ಪಿಸುವ ಪದ್ಧತಿ ವಿಶ್ವದಾದ್ಯಂತ ಪ್ರಚಲಿತದಲ್ಲಿದೆ.

Ware
Earthen ware, clay ware.
ಮಣ್ಣಿನ ಮಡಕೆ ಕುಡಿಕೆಗಳು, ಕುಂಭ ವಸ್ತುಗಳು.

Warp
Distoration of a pot become bent.
ಡೊಂಕು, ಬಾಗು, ವಕ್ರತೆ ಹವಾಮಾನದ ವೈಪರೀತ್ಯ, ಹಸಿಮಡಕೆಗಳು ಸರಿಯಾಗಿ ಒಣಗದಿರುವುದು, ಆವಿಗೆಯಲ್ಲಿಟ್ಟು ಸುಡುವಾಗಿನ ದೋಷಗಳಿಂದ ಹೀಗೆ ಬೇರೆ, ಬೇರೆ, ಕಾರಣಗಳಿಂದ ಮಡಕೆಗಳು, ಡೊಂಕಾಗುವ, ಬಾಗುವ ಸಾಧ್ಯತೆಗಳಿವೆ.

Water pot
Pot used for drawing water from the well and also carrying and storing water vessel.
ಕೊಡ, ಬಿಂದಿಗೆ, ಹೂಜೆ.

Wax risist
A method of decoration by painting wax on to a surface which will resist.
ಮೇಣ ಲೇಪಿಸಿ, ಮಡಕೆಯನ್ನು ಅಂದಗೊಳಿಸುವ ವಿಧಾನ, ಇದೊಂದು ರೀತಿಯ ಕುಂಭಾಲಂಕರಣ.


logo