logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Tea urn
Tea pot
ಚಹಮಾಡಲು ನೀರನ್ನು ಕುದಿಸುವ ಪಾತ್ರೆ,ಟೀಮಡಕೆ.

Tenmoku
A Japenese name for a glaze which has high iron content giving rich red/black brown colour.
ಅಧಿಕ ಕಬ್ಬಿಣಾಂಶವುಳ್ಳ, ಕುಂಪು, ಕಪ್ಪು, ಕಂದು ಬಣ್ಣದ ಗ್ಲೇಸಿಗೆ ಜಪಾನಿಯರು ಕರೆಯುವ ಹೆಸರು.

Terracotta
A collective term used to describe low fired unglazed colour pottery including most primitive pottery
ಕುಂಭ ವಸ್ತುಗಳಲ್ಲಿ ಇದು ಒಂದು ಪ್ರಕಾರ ಬಹಳ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ, ಇಟಲಿ ಭಾಷೆಯ ಮೂಲದಿಂದ ಬಂದದ್ದು. ಟ್ರೆರ್ರಾಕೊಟಾ ವಸ್ತುಗಳು ಸಾಮಾನ್ಯವಾಗಿ ಕೆಂಪು, ಕಂದು, ಬಣ್ಣವನ್ನು ಹೊಂದಿರುತ್ತವೆ. ಕಡಿಮೆ ತಾಪಮಾನದಲ್ಲಿ ಸುಡುವರು. ಸಾಮಾನ್ಯ ಗಹಬಳಕೆಯ ವಸ್ತುಗಳಿಂದ ಮೊದಲ್ಗೊಂಡು ಮೃತ್ ಶಿಲ್ಪದ ವಸ್ತುಗಳೆಲ್ಲಾ ಈ ಪ್ರಕಾರಕ್ಕೆ ಒಳಪಡುತ್ತವೆ. ಬಂಗಾಳವು ಟೆರ್ರಕೊಟಾ ತಯಾರಿಕೆಯಲ್ಲಿ ಹೆಸರು ಪಡೆದಿದೆ.

Terrasigillate
A very fine slip used for coating pots, it is often fine enough to shine without being burnished.
ಉತ್ತಮವಾದ ದ್ರವರೂಪದ ಮಣ್ಣು ಮಡಕೆಗಳ ಮೈಗೆ ಲೇಪಿಸಿ ಹೊಳೆಯುವಂತೆ ಮಾಡುವುದು ಅಂದಗೊಳಿಸುವುದು.

Texture
Any thing woven.
ರಚನೆ, ವಿನ್ಯಾಸ.

Throwing
The method of making clay shapes on a potters wheel.
ಚಕ್ರದಿಂದ ಮಡಕೆ ಮಾಡುವುದು. ಚಕ್ರದ ಹಣೆಗೆ ಮಣ್ಣುಹಾಕಿ ಚಕ್ರವನ್ನು ತಿರುಗಿಸಿ ಗೇಯುವುದು.

Thumb pot
A very small flower pot.
ಚಿಕ್ಕ ಗಾತ್ರದ ಹೂ ಕುಂಡ.

Tile
Thin piece of baked clay.
ಮಾಳಿಗೆ ಹಂಚು.

Toby
A beer mug shaped like a man with three cornered hat.
ಮುಮ್ಮೂಲೆಯ ಟೊಪ್ಪಿಗೆ ಧರಿಸಿದ ಮನುಷ್ಯನಾಕಾರದ ಮದು ಹೂಜೆ.

T-material
An english term for a beautifully plastic grogged clay ideal for large pieces of work.
ಇದು ಇಂಗ್ಲಿಷ್ ಪದ, ದೊಡ್ಡ ದೊಡ್ಡ ಕುಂಭವಸ್ತುಗಳ ತಯಾರಿಕೆಗೆ ಮರಳು ಬೆರಸಿ, ಹದಮಾಡಿಟ್ಟ ಮಿದುಣತ್ವ ಹೊಂದಿದ ಮಣ್ಣು.


logo