logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Pitcher
Large jug, vessel, big pitcher, small pitcher. Pitcher strikes the stone (prv)
ಬಿಂದಿಗೆ, ಬಾವಿಯಿಂದ ನೀರು ಎತ್ತಲು ಉಪಯೋಗಿಸುವ ಮಣ್ಣಿನ ಗಡಿಗೆ ಬಾಯಿ ಚಿಕ್ಕದಿದ್ದು ಮೈ ದುಂಡಗಿರುತ್ತದೆ. ಹೂಜಿ, ಮರಿಗೆ

Pitchers
Broken fired pottery which has been ground to a powder for adding to clay as a filler.
ಸುಟ್ಟ ಮಡಕೆಯ ಬೂದಿ, ದಪ್ಪ ಕಣಗಳಿರುತ್ತವೆ. ಹದಗೊಳಿಸಲು ಹಸಿಮಣ್ಣಿಗೆ ಬೆರಸುವರು.

Plaster of Paris
Hydrate of calcium sulphate made by gypsum. It hardens after being mixed with water used for making plaster casts etc.,
ಜಿಪ್ಸಮ್ಮಿನ ನುಣ್ಣನೆಯ ಬಿಳಿಪುಡಿ ಅಚ್ಚುಗಳನ್ನು ಮಾಡಲು ಉಪಯೋಗಿಸುವರು.

Plasticity
Quality of being plastic.
ಲೆಪ್ಪಕೆಲಸದ: ಜೇಡಿ, ಮೇಣ, ಮೊದಲಾದ ಮೆದು ಪದಾರ್ಥಗಳ ಮುದ್ದೆಗೆರೂಪ ಕೊಡುವ ಕುಂಭಕಲೆ ಇತ್ಯಾದಿ.

Plastic earth
An alternative term which may be used in referring to any of the material clays used in the sculpture and ceramics.
ಕುಂಬಾರಿಕೆ, ಹಾಗೂ ಮೃತ್ ಶಿಲ್ಪಕ್ಕೆ ಬಳಸುವ ಮಣ್ಣಿಗಿರುವ ಮತ್ತೊಂದು ಹೆಸರು ಪ್ಲಾಸ್ಟಿಕ್ ಮಣ್ಣು, ಹೆಚ್ಚು ಮಿದುಣತ್ವ ಗುಣ ಹೊಂದಿರುವ ಮಣ್ಣು ಜೇಡಿಮಣ್ಣು.

Plate
A shallow dish, covering plate.
ತಟ್ಟೆ, ಬಟ್ಟಲು, ಮುಚ್ಚಳ ಮಣ್ಣು ಅಥವಾ ಪಿಂಗಾಣಿಯ ಊಟದ ತಟ್ಟೆ.

Porcelain
A fine earthern ware, while thin transparernt or semi transparent first made in China-pocelain is fired at 1300 to 1450º
ನಯವಾದ ಮಡಕೆ ಪಿಂಗಾಣಿ ಪಾರದರ್ಶಕ ಇಲ್ಲವೆ ಅರೆ ಪಾರದರ್ಶಕವಾದದ್ದು. ಪಿಂಗಾಣಿಯನ್ನು ಚೀನಿಯರು ವಿಶ್ವಕ್ಕೆ ಮೊದಲು ಪರಿಚಯಿಸಿದವರು.

Polish
Make or become smooth or glassy by rubbing.
ಕುಂಭ ವಸ್ತುಗಳನ್ನು ಮೆರುಗೆಣ್ಣಿಯಿಂದ ಉಜ್ಜಿ ಹೊಳಪು ಗೊಳಿಸುವುದು ಗ್ರಾಮೀಣ ಪ್ರದೇಶದ ಕುಂಬಾರರು ಭೂಮಿಯಲ್ಲಿ ಸಿಗುವ ಹೊಮ್ಮಣ್ಣು ತಂದು ಪುಡಿ ಮಾಡಿ ಸ್ವಲ್ಪ ನೀರು ಹಾಕಿ ಬಟ್ಟೆಗೆ ಹಚ್ಚಿಕೊಂಡು ಮಡಕೆಯ ಮೈಯನ್ನು ಉಜ್ಜಿ ಹೊಳಪು ಗೊಳಿಸುವರು. ಸಾಮಾನ್ಯವಾಗಿ ಈ ಕೆಲಸವನ್ನು ಮಹಿಳೆಯರು ಮತ್ತು ಮಕ್ಕಳು ಮಾಡುವರು.

Porcelain Clay
A term generally applied to white vitreous tranclucent pottery clay.
ಕೆಯೊಲಿನ್' ಅಥವಾ ಚೀನಿಜೇಡು ಚೈನಾ ಮಣ್ಣು ಎನ್ನುವರು. ಬಿಳಿಜೇಡಿನಿಂದ ಬಹುವಾಗಿ ಪಿಂಗಾಣಿ ಸಾಮಾನುಗಳನ್ನು ಅಧಿಕ ಶಕ್ತಿಯ ವಿದ್ಯುತ್ ಅವಾಹಕಗಳು ಮತ್ತು ಇತರೆ ಅಗ್ನಿನಿರೋಧಕ ವಸ್ತುಗಳನ್ನು ತಯಾರಿಸುವರು. ಬೆಂಗಳೂರು ಮತ್ತು ಹಾಸನ ಸುತ್ತಮುತ್ತ ಬಿಳಿಜೇಡು ಹೆಚ್ಚಾಗಿ ದೊರೆಯುವುದು.

Porosity
The proportion of pores or small spaces between the solid particles.
ತೂತುಗಳಿರುವಿಕೆ; ಸಚ್ಚಿದ್ರತೆ, ಸರಂದ್ರತೆ, ಸಾಮಾನ್ಯ ಸುಡತಿಯಲ್ಲಿ ಸುಟ್ಟ ಮಡಕೆಗಳು ಸಚ್ಚಿದ್ರತೆ ಮೈಯನ್ನು ಹೊಂದಿರುತ್ತವೆ. ಗ್ಲೇಸಿಂಗ್ ಮಾಡುವುದರಿಂದ ರಂಧ್ರಗಳು ಮುಚ್ಚಿಕೊಳ್ಳುತ್ತವೆ.


logo