logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಷಂಡ
ಗುಂಪು; ನಪುಂಸಕ

ಷಂಡಕವೇದ
(ಜೈನ) ಒಂದು ಬಗೆಯ ನೋಕಷಾಯ

ಷಟ್ಕರ್ಮ
ಬ್ರಾಹ್ಮಣನ ಆರು ಕೆಲಸಗಳು: ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ, ಪ್ರತಿಗ್ರಹ; (ಜೈನ) ಶ್ರಾವಕನ ಆರು ಕರ್ತವ್ಯಗಳು: ಇಜ್ಯೆ, ವಾರ್ತೆ, ದತ್ತಿ, ಸ್ವಾಧ್ಯಾಯ, ಸಂಯಮ, ತಪ

ಷಟ್ಕಷಾಯ
(ಜೈನ) ಹಾಸ್ಯ, ರತಿ, ಶೋಕ, ಭಯ, ಅರತಿ, ಜುಗುಪ್ಸೆ ಎಂಬ ಆರು ದೋಷಗಳು

ಷಟ್ಖಂಡ
(ಜೈನ) ವಿಜಯಾರ್ಧಪರ್ವತದ ಉತ್ತರದಲ್ಲಿ ಗಂಗೆ ಸಿಂಧುಗಳಿಂದ ಬೇರ್ಪಡಿಸಲ್ಟಟ್ಟ ಮೂರು; ಅದಕ್ಕೆ ದಕ್ಷಿಣದಲ್ಲಿರುವ ಮೂರು ಹೀಗೆ ಒಟ್ಟು ಆರು ಭೂಭಾಗಗಳು

ಷಟ್ವಕ್ರ
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧ, ಆಜ್ಞಾ

ಷಟ್ಚರಣ
ದುಂಬಿ

ಷಟ್ತರ್ಕ
ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ವೇದಾಂತ, ಪೂರ್ವಮೀಮಾಂಸೆ ಎಂಬ ಆರು ದರ್ಶನಗಳು

ಷಟ್ತ್ರಿಂಶದ್ಗುಣ
(ಜೈನ) ಮುನಿಗಳಲ್ಲಿರಬೇಕಾದ ಮೂವತ್ತಾರು ಮೂಲೋತ್ತರಗುಣಗಳು; ದ್ವಾದಶ ತಪಸ್ಸುಗಳು, ದಶಧರ್ಮಗಳು, ಪಂಚಾಚಾರಗಳು, ತ್ರಿಗುಪ್ತಿಗಳು; ಅವುಗಳನ್ನು ಪಡೆದವನು

ಷಡ್ದರ್ಶನ
ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವಮೀಮಾಂಸೆ ಮತ್ತು ಉತ್ತರ ಮೀಮಾಂಸೆಗಳೆಂಬ ಆರು ತಾತ್ವಿಕ ನಿಲವುಗಳು


logo