logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಲೋಕಜ್ಞ
ಲೋಕದ ರೀತಿನೀತಿಗಳನ್ನು ಬಲ್ಲವನು

ಲೋಕನೇತ್ರ
ಸೂರ್ಯ, ಚಂದ್ರ

ಲೋಕಪೂರಣ(ಕ್ರಿಯೆ)
(ಜೈನ) ಕೇವಲಿಗಳ ಆತ್ಮವು ಭೂಮಂಡಲದ ವಾಯುತ್ರಯದೊಡನೆ ಬೆರೆಯುವುದು

ಲೋಕಪ್ರತೀತ
ಜಗತ್ಪ್ರಸಿದ್ಧ

ಲೋಕಲುಂಟಾಕ
ಲೋಕಕ್ಕೆ ಪೀಡೆಯಾದವನು

ಲೋಕಾಂತರಿತ
ಬೇರೆ ಲೋಕಕ್ಕೆ ಹೋದವನು, ಸತ್ತವನು

ಲೋಕಾಂತಿಕ(ದೇವ)
(ಜೈನ) ಸಾರಸ್ವತ, ಆದಿತ್ಯ, ವಹ್ನಿ, ಅರುಣ, ಗರ್ದತೋಯ. ತುಷಿತ, ಅವ್ಯಾಬಾಧ, ಅರಿಷ್ಟ ಎಂಬ ಎಂಟು ಮಂದಿ

ಲೋಕಾಕಾರಕಥನ
(ಜೈನ) ಅಧೋ, ಮಧ್ಯ, ಊರ್ಧ್ವಲೊಕಗಳ ವರ್ಣನೆ

ಲೋಕಾಕಾಶ
(ಜೈನ) `ಷಡ್ದ್ರವ್ಯ'ಗಳನ್ನು ಹೊಂದಿರುವ ಆಕಾಶಪ್ರದೇಶ

ಲೊಕಾಖ್ಯಾನ
(ಜೈನ) ಲೋಕದ ಆಕಾರ ವರ್ಣನೆ


logo