logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಪಂಚಸ್ಥಾನ
ಯುದ್ಧಮಾಡುವಾಗ ನಿಂತುಕೊಳ್ಳುವ ಆಲೀಢ, ಪ್ರತ್ಯಾಲೀಢ, ಸಮಪಾದ, ವೈಷ್ಣವ, ಮಂಡಲಾಗ್ರ ಎಂಬ ಐದು ಸ್ಥಾನಗಳು

ಪಂಚಾಂಗ
ತಿಥಿ, ವಾರ, ನಕ್ಷತ್ರ, ಯೊಗ, ಕರಣಗಳೆಂಬ ದಿನದ ಐದು ಅಂಶಗಳು; ಔಷಧಿತಯಾರಿಕೆಯಲ್ಲಿ ಗಿಡಮರಗಳ ತೊಗಟೆ, ಎಲೆ, ಹೂವು, ಬೇರು, ಹಣ್ಣುಗಳೆಂಬ ಐದು ಅಂಶಗಳು

ಪಂಚಾಂಗಮಂತ್ರ
ಕರ್ಮಾರಂಭೋಪಾಯ, ಪುರುಷದ್ರವ್ಯಸಂಪತ್ತು, ದೇಶಕಾಲವಿಭಾಗ, ವಿನಿಪಾತಪ್ರತೀಕಾರ, ಕಾರ್ಯಸಿದ್ಧಿ ಎಂಬ ರಾಜನೀತಿಯ ಐದು ಅಂಶಗಳು

ಪಂಚಾಂಗಶುದ್ಧಿ
ದಿನದ ಐದು ಅಂಶಗಳಲ್ಲಿ ಯಾವುದೇ ದೋಷವಿಲ್ಲದಿರುವುದು; ಔಷಧಿತಯಾರಿಕೆಯಲ್ಲಿ ಗಿಡಮರಗಳ ಐದು ಅಂಶಗಳು ದೋಷರಹಿತವಾಗಿರುವುದು

ಪಂಚಾಂಗಸನ್ಮಂತ್ರ
ಐದು ಅಕ್ಷರಗಳ ಶ್ರೇಷ್ಠ ಮಂತ್ರ

ಪಂಚಾಗ್ನಿ
ಐದು ಬಗೆಯ ಅಗ್ನಿಗಳು: ಪವನ, ಪಾವನ, ತ್ರೇತಾ, ಗಾರ್ಹಪತ್ಯ, ಆಹವನೀಯ; ಋಷಿಗಳ ಬೇಸಿಗೆಯ ತಪಸಸ್ಸಿನ ಐದು ಅಗ್ನಿಗಳು: ನಾಲ್ಕು ಕಡೆಯ ಬೆಂಕಿ ಮತ್ತು ನೆತ್ತಿಯ ಮೇಲಿನ ಸೂರ್ಯ

ಪಂಚಾಗ್ನಿಸಾಧಕ
ನಾಲ್ಕು ಕಡೆಯ ಬೆಂಕಿ ಮತ್ತು ನೆತ್ತಿಯ ಮೇಲಿನ ಸೂರ್ಯ ಇವುಗಳ ನಡುವೆ ತಪಸ್ಸು ಮಾಡುವವನು

ಪಂಚಾಚಾರ
(ಜೈನ) ದರ್ಶನ, ಜ್ಞಾನ, ಚಾರಿತ್ರ, ತಪ, ವೀರ್ಯ ಎಂಬ ಐದು ಆಚಾರಗಳು

ಪಂಚಾಣುವ್ರತಗಳು
(ಜೈನ) ಶ್ರಾವಕರು ಆಚರಿಸಬೇಕಾದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ವ್ರತಗಳು

ಪಂಚಾಣೂತ್ತರೆ
(ಜೈನ) ಲೋಕಾಕಾಶದ ತುದಿಯ ನೆಲೆಯಲ್ಲಿರುವ ವಿಜಯ, ವೈಜಯಂತ, ಜಯಂತ, ಅಪರಾಜಿತ, ಸರ್ವಾರ್ಥಸಿದ್ಧಿ ಎಂಬ ಐದು `ವಿಮಾನ`ಗಳು


logo