logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಪಂಚಮಸಮುದ್ರ
ಪಂಚಮಜಲ(ಳ)(ನಿ)ಧಿ

ಪಂಚಮಹಾಕಲ್ಯಾಣ
ಪಂಚಕಲ್ಯಾಣ

ಪಂಚಮಹಾಪಾತಕ
ಐದು ಮಹಾಪಾತಕಗಳು; ವಿವಿಧ ಧರ್ಮಗಳಲ್ಲಿನ ಹಾಗೂ ಕಾಲಗಳಲ್ಲಿನ ಇವುಗಳ ವಿವರಗಳಲ್ಲಿ ವ್ಯತ್ಯಾಸವಿದೆ; ಸಾಮಾನ್ಯವಾಗಿ ಹೇಳುವುದೆಂದರೆ ಬ್ರಹ್ಮಹತ್ಯೆ, ಸುರಾಪಾನ, ಸ್ವರ್ಣಸ್ತೇಯ, ಗುರುಪತ್ನೀಗಮನ, ಇವುಗಳನ್ನು ಮಾಡಿದವನ ಜೊತೆಗಿನ ಸಂಪರ್ಕ; (ಜೈನ) ಬಾಲವಧೆ, ಸ್ತ್ರೀವಧೆ, ಗೋವಧೆ, ಬ್ರಾಹ್ಮಣವಧೆ, ಋಷಿವಧೆ

ಪಂಚಮಹಾಪಾತಕಿ
ಐದು ಮಹಾಪಾತಕಗಳನ್ನು ಮಾಡಿದವನು

ಪಂಚಮಹಾಭೂತ
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ

ಪಂಚಮಹಾವ್ರತ
(ಜೈನ) ಶ್ರಾವಕರು ಆಚರಿಸಬೇಕಾದ ಪಂಚಾಣುವ್ರತಗಳನ್ನು ಮುನಿಗಳು ಮತ್ತಷ್ಟು ಗಾಢವಾಗಿ ಆಚರಿಸುವುದು

ಪಂಚಮಹಾಶಬ್ದ
ಐದು ವಾದ್ಯಗಳು; ಇವುಗಳ ವಿವರಗಳು ಕಾಲಕಾಲಕ್ಕೆ ಬದಲಾಗಿವೆ; ಸಾಮಾನ್ಯವಾದ ಪಟ್ಟಿಯೆಂದರೆ ಕೊಂಬು, ತಮಟೆ, ಶಂಖ, ಭೇರಿ, ವೀಣೆ, ಜಯಗಂಟೆ; ಐದು ವಾದ್ಯಗಳ ಬಾಜನೆಯ ಗೌರವ

ಪಂಚಮಾಂಚಿತ
ಪಂಚಮಸ್ವರದಿಂದ ಆಹ್ಲಾದಕರವಾದ

ಪಂಚಮಾಬ್ಧಿ
ಪಂಚಮಜಲಧಿ

ಪಂಚಮಿ
ಶುಕ್ಲ ಕೃಷ್ಣಪಕ್ಷಗಳಲ್ಲಿನ ಐದನೆಯ ದಿನ


logo