logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಧರ್ಮಾಸ್ತಿಕಾಯ
(ಜೈನ) ಪಂಚಾಸ್ತಿಕಾಯಗಳಲ್ಲಿ ಒಂದು; ಬಹುಪ್ರದೇಶದಲ್ಲಿ ವ್ಯಾಪಿಸಿರುವ ಧರ್ಮದ್ರವ್ಯ, ನೋಡಿ, `ಪಂಚಾಸ್ತಿಕಾಯ`

ಧರ್ಮಿ
ಧರ್ಮಪರಾಯಣ

ಧರ್ಮೋಪದೇಶ
ಧರ್ಮತತ್ವಗಳ ಬೋಧನೆ; (ಜೈನ) ಸ್ವಾಧ್ಯಾಯದ ಐದು ಅಂಗಗಳಲ್ಲಿ ಒಂದು

ಧರ್ಮೋಪದೇಶಂಗೆಯ್
ಧರ್ಮೋಪದೇಶ ಮಾಡು

ಧರ್ಮೋಪದೇಶಿ
ಧರ್ಮೋಪದೇಶ ಮಾಡುವವನು

ಧವಲ(ಳ)
ಬಿಳಿಯ; ಒಂದು ಬಗೆಯ ಗಾನ

ಧವಲ(ಳ)ಚಾಮರ
ಬಿಳಿಯ ಚಾಮರ

ಧವಲ(ಳ)ಚ್ಛತ್ರ
ಬೆಳ್ಗೊಡೆ

ಧವಲ(ಳ)ಪಕ್ಷ
ಹಂಸ

ಧವಲಾ(ಳಾ)ಕ್ಷತ
ಬಿಳಿಯ ಅಕ್ಷತೆ


logo