logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಧರ್ಮಂಗೆಯ್
ಪುಣ್ಯಕೆಲಸಮಾಡು

ಧರ್ಮಂಬೆಱು
ಧರ್ಮದೀಕ್ಷೆಯನ್ನು ಪಡೆ

ಧರ್ಮಕಥನ
ಧರ್ಮಬೋಧನೆ ಮಾಡುವುದು

ಧರ್ಮಕಥೆ
ಧರ್ಮದ ಬಗ್ಗೆ ಹೇಳುವ ಕತೆ; (ಜೈನ) ಇದರಲ್ಲಿ ಆಕ್ಷೇಪಣಿ, ವಿಕ್ಷೇಪಣಿ, ಸಂವೇದನಿ, ನಿರ್ವೇದನಿ ಎಂದು ನಾಲ್ಕು ಬಗೆ

ಧರ್ಮಕರ
ಧರ್ಮವನ್ನು ಮಾಡುವವನು; ಬಿಲ್ಲು ಹಿಡಿದವನು

ಧರ್ಮಕಾರ್ಯ
ಪುಣ್ಯದ ಕೆಲಸ

ಧರ್ಮಕ್ಷೇತ್ರ
ಪುಣ್ಯಕ್ಷೇತ್ರ

ಧರ್ಮಗಳ್
ಧರ್ಮ+ಕಳ್, ಪುಕ್ಕಟೆ ಕೊಡುವ ಕಳ್ಳು, ಹೆಂಡ

ಧರ್ಮಗಳ್ಗುಡಿ
ಧರ್ಮಗಳ್ಳನ್ನು ಕುಡಿಯುವುದು

ಧರ್ಮಗೇಹ
ಧರ್ಮಕ್ಕೆ ಮನೆಯಂತಿರುವುದು; ನಂದಿ


logo