logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಇಂದೊ(ಯ)ಳ
ಮಧುರ ಗಾನ; ಹಿಂದೋಳ ರಾಗ

ಇಂದ್ರ
ದೇವತೆಗಳ ಒಡೆಯ; ದ್ವಾದಶಾದಿತ್ಯರಲ್ಲಿ ಒಬ್ಬ; ಒಡೆಯ; ಶ್ರೇಷ್ಠ

ಇಂದ್ರಕ
ಸಭಾಮಂಟಪ; (ಜೈನ) ನರಕಬಿಲಗಳಲ್ಲಿ ಒಂದು ಬಗೆ; ಸೌಧರ್ಮೇಂದ್ರ ಮುಂತಾದವರ ವಿಮಾನಗಳಲ್ಲಿ ಒಂದು ಬಗೆ

ಇಂದ್ರಕೀಲ
ಒಂದು ಪರ್ವತದ ಹೆಸರು

ಇಂದ್ರಕೇತು
ಇಂದ್ರನ ಧ್ವಜ; (ಜೈನ) ಮಹಾಮಂಡಲೇಶ್ವರರ ಜಿನಪೂಜೆ

ಇಂದ್ರಕೋದಂಡ
ಇಂದ್ರಧನುಸ್ಸು

ಇಂದ್ರಕೋಶ
ತವಗ, ಸುಖಾಸನ

ಇಂದ್ರಗಾಯಕ
ಇಂದ್ರನ ಹಾಡುಗಾರ

ಇಂದ್ರಗೋಪ
ಮಿಂಚುಹುಳು, ಹೊನ್ನೆ ಹುಳು; ಹಡಗಿನ ಮಂಚ

ಇಂದ್ರಚಾಪ
ಕಾಮನ ಬಿಲ್ಲು


logo