logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಇಂಗಳಗಣ್
ಬೆಂಕಿಯ ಕಣ್ಣು; ಉರಿಯುವ ಕಣ್ಣು

ಇಂಗಿಣೀಮರಣ
(ಜೈನ) ಹತ್ತೊಂಬತ್ತು ಬಗೆಯ ಮರಣಗಳಲ್ಲಿ ಒಂದು; ಯತಿಯು ಸಂಗವನ್ನು ತೊರೆದು ಒಂಟಿಯಾಗಿದ್ದು, ಆಹಾರವನ್ನು ಬಿಟ್ಟು, ಉಪಸರ್ಗದಲ್ಲಿ ಉಪಚಾರ ಬಿಟ್ಟು ಸಮತೆಯಿಂದ ಹೊಂದುವ ಮರಣ

ಇಂಗು
ಬತ್ತು

ಇಂಗುಲಿಕ
ಇಂಗಲೀಕ, ಹಿಂಗುಳ; ಪಾದರಸದಿಂದಾದ ಅದಿರು

ಇಂಗೂಟ
ಇನಿದಾದ ಕೂಟ; ಸಂಭೋಗ

ಇಂಗೋಲ್
ರುಚಿಯಾದ ಕೋಲು, ಕಬ್ಬು

ಇಂಗೋಲ
ಕಬ್ಬುವಿಲ್ಲ, ಮನ್ಮಥ

ಇಂಗೋಲ್ವಿಲ್ಲ
ಇಂಗೋಲ, ಮನ್ಮಥ

ಇಂ(ಈಂ)ಚರ
ಇಂಪಾದ ಧ್ವನಿ; ಇನಿದಾದ ಸರ(ಬಾಣ) ಉಳ್ಳವನು, ಮನ್ಮಥ

ಇಂಚರಂಗಱೆ
ಮಧುರಧ್ವನಿ ಮಾಡು


logo