logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂತರತೆರೆ
ಕೆಲವು ವೇಷಗಳ ಪ್ರವೇಶ ದೃಶ್ಯಕ್ಕೆ ಚಪ್ಪರದಂತೆ ಹಿಡಿಯುವ ಜಾಲರಿ ಇರುವ ವಸ್ತ್ರ

ಅಂತರತೆರೆ ಪೊರಪ್ಪಾಡು
ಯಕ್ಷಗಾನದಲ್ಲಿ ಅಂತರ ತೆರೆಯೊಂದಿಗೆ ಮಾಡುವ ಪ್ರವೇಶನೃತ್ಯದ ದೃಶ್ಯ (ದಕ.ಜಿ)

ಅಂತರದ ಕಲುಕಟ್ಟೆ
ಮೆಟ್ಟಲುಗಳಿರುವ ಕಲ್ಲಿನಕಟ್ಟೆ

ಅಂತರನೀರು
ಬಾವಿಯಿಂದ ನೀರನ್ನು ಸೇದಿ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಸಾಗಿಸುವುದು

ಅಂತರಪಟ
ಸುಮುಹೂರ್ತಕ್ಕೆ ಮೊದಲು ವಧೂವರರು ಪರಸ್ಪರ ಮುಖದರ್ಶನ ಮಾಡಬಾರದೆಂದು ನಡುವೆ ಹಿಡಿಯುವ ತೆರೆ; - ಪರದೆ; ಮಾಂಗಲ್ಯಧಾರಣೆಗೆ ಮೊದಲು ವಧೂವರರ ಮಧ್ಯೆ ಅಡ್ಡಲಾಗಿ ಹಿಡಿಯುವ ಬಟ್ಟೆ

ಅಂತರಪಟ
ಜವನಿಕೆ

ಅಂತರಪಿಶಾಚಿ
ಎಲ್ಲಿಯೂ ನೆಲೆ ಇಲ್ಲದಿರುವವನು.
ಅವನೊಬ್ಬ ಅಂತರಪಿಶಾಚಿ

ಅಂತರಬರುವ
ತಲೆಕೆಳಗೆಮಾಡು (ಚಾಮ.ಜಿ)

ಅಂತರಬೆಂತರ
ಪಿಶಾಚಿ; ಭೂತ

ಅಂತರಭುಗಲಿಪಟ
ಒಂದು ಬಗೆಯ ಗಾಳಿಪಟ


logo