logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಡುರ್ಗಪ್ಪಿ
ದೊಡ್ಡ ಕಪ್ಪೆ (ಧಾರ.ಜಿ)

ಅಂಡುಸುಟ್ಟಂಕುಳಿ
ಸೌತೆಕಾಯಿಯ ಒಂದು ವ್ಯಂಜನ. ತೆಂಗಿನತುರಿ ಮತ್ತು ಒಣಮೆಣಸು ರುಬ್ಬಿಕೊಂಡು, ಹುರಿದ ಸೌತೆಕಾಯಿ ಹೋಳುಗಳನ್ನು ಅದರೊಟ್ಟಿಗೆ ಹಾಕಿ ಕುದಿಸಿದ್ದು (ಚಿಮ.ಜಿ)

ಅಂಡುಹಿಡಿಯೋದು
ಶಾಖ ಹೆಚ್ಚಾಗಿ, ಪಾತ್ರೆಯ ತಳದಲ್ಲಿರುವ ಅಡುಗೆ ಸೀಯುವುದು; ತಳ ಹಿಡಿಯುವುದು (ಮಂಡ್ಯ.ಜಿ)

ಅಂಡುಹಿಡಿಯೋದು
ನಿರುದ್ಯೋಗ

ಅಂಡುಹಿಡಿಯೋದು
ಸದಾ ಮನೆಯಲ್ಲೇ ಕುಳಿತುಕೊಳ್ಳುವುದು; ಸೋಮಾರಿತನ

ಅಂಡುಹೇರು
ಮುಳ್ಳುಟೊಂಗೆಗಳನ್ನು ಒಂದರ ಮೇಲೊಂದಿಡು; ಅಡ್ಡಿಒಡ್ಡು (ಉಕ.ಜಿ)

ಅಂಡೂರು
ಅನಪೇಕ್ಷಿತವಾಗಿ ಅನ್ಯರಲ್ಲಿ ಬಂದು ತಳ ಊರು (ದಕ.ಜಿ)

ಅಂಡೆ
ಹಂಡೆ; ಸ್ನಾನಕ್ಕೆ ನೀರು ಕಾಯಿಸಲು ಬಳಸುವ ಮಣ್ಣು ಅಥವಾ ತಾಮ್ರದ ದೊಡ್ಡ ಪಾತ್ರೆ; ಕಳಸಿಗೆ

ಅಂಡೆ
ಟೊಳ್ಳು ಬಿದಿರಿನ ಗೆಣ್ಣಿನ ಕೆಳಭಾಗವನ್ನು ಉಳಿಸಿ ಇನ್ನೊಂದು ಕಡೆ ಗೆಣ್ಣು ತೆಗೆದುಹಾಕಿ ಬಾಯಿ ಮಾಡಿರುವ ಕೊಳವೆ. ಇದನ್ನು ಉಪ್ಪು, ಔಷಧಿ, ಕೀಲೆಣ್ಣೆ ಕಾಗದಪತ್ರಗಳು ಮೊದಲಾದುವನ್ನು ಹಾಕಿಡಲು ಬಳಸುತ್ತಾರೆ

ಅಂಡೆ
ಮೊಸರು ಕಡೆಯಲು ಬಳಸುವ ಬಿದಿರಿನ ಸಾಧನ (ದಕ.ಜಿ)


logo