logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಡಲೆ
ಕಾರಣವಿಲ್ಲದೆ ಅಲೆದಾಡು; ತಿರುಗಾಡು; ಬೀದಿಸುತ್ತು

ಅಂಡಳ್ಳಾಟ
ನೋಡಿ - ಆಣಿಕಲ್ಲಾಟ (ಶಿವ.ಜಿ)

ಅಂಡಳ್ಳೊಗದಂಗ
ಯಾವಾಗಲಾದರೂ ಒಂದೊಂದು ದಪ್ಪ ದಪ್ಪ ಹನಿ ಮಳೆ ಆಗುವುದು (ಶಿವ.ಜಿ)

ಅಂಡಾಡ್ದಮನೆ
ಹೆಣ್ಣುಮಕ್ಕಳು ಹೆಚ್ಚಾಗಿರುವ ಮನೆ (ಮಂಡ್ಯ.ಜಿ)

ಅಂಡಾಡ್ಸು
(ಕ್ರಿ)
ಅಂಡಾನ್ನು ಆಡಿಸು; ತಳವನ್ನು ತಿರುಗಿಸು

ಅಂಡಾಡ್ಸು
ಸಾರಿನ ಪಾತ್ರೆಯ ತಳ ಸೀಯದಂತೆ ಸೌಟಿನಿಂದ ತಿರುವು

ಅಂಡಾಪುರಕಿ
ಒಬ್ಬೊಬ್ಬರ ಹತ್ತಿರ ಒಂದೊಂದು ರೀತಿ ಮಾತನಾಡುವವನು; ಅವಕಾಶವಾದಿ; ಇಬ್ಬಂದಿ; ಸಮಯ ಸಾಧಕ

ಅಂಡಾಪುರಕಿ
ಬುದ್ಧಿ ಇಲ್ಲದವ; ಒಂದು ಬೈಗುಳ.
ಅಂಡಪುರುಲ್ಕಿ, ಅಂಡಾಳ

ಅಂಡಾಳ
ನೋಡಿ - ಅಂಡಾಪುರಕಿ

ಅಂಡಿ
ಬೆಳವಣಿಗೆಯಿಲ್ಲದುದು (ಮಂಗ.ಜಿ)


logo