ಒಂದು ಹೊತ್ತು ಉಪವಾಸ ಇರುವ ವ್ರತ. ಮದುವೆ ಅಥವಾ ಜಾತ್ರೆಯ ಸಂದರ್ಭದಲ್ಲಿ ಮನೆಗೆ ದೇವರನ್ನು ಕರೆಸುವಾಗ, ಪೂಜೆಯ ಹಿಂದಿನ ದಿನ ಸಂಜೆ ತಮಗೆ ಬೇಕಾದವರ ಮನೆಗೆ ಹೋಗಿ ಮುತ್ತೈದೆಯ ಹಣೆಗೆ ಕುಂಕುಮ ಹಚ್ಚಿ, ಪೂಜೆಗೆ ಆರತಿ ತೆಗೆದುಕೊಂಡು ಬರಲು ಆಹಾನಿಸುವರು. ದೇವರ ಈ ಕಾರ್ಯ ಮುಗಿಯುವವರೆಗೂ ಆಹ್ವಾನಿತ ಮುತ್ತೈದೆಯರು ಉಪವಾಸವಿರಬೇಕು (ಶಿವ.ಜಿ)
ಒಂದನೆಯ ಕಾಲ
ಹಾಡುಗಾರಿಕೆ, ವಾದ್ಯ, ನೃತ್ಯಗಳಲ್ಲಿನ ಮೊದಲ ಕಾಲ; ನಿಧಾನಗತಿಯ ನಡೆ (ದಕ.ಜಿ)