ಭತ್ತ, ರಾಗಿ, ಜೋಳ, ಸಜ್ಜೆ ಪೈರುಗಳಿಂದ ಧಾನ್ಯಗಳನ್ನು ಪ್ರತ್ಯೇಕಿಸುವ ಕ್ರಿಯೆಯಲ್ಲಿ ಬಳಸುವ ಸಲಕರಣೆ
ಒಕ್ಕತೀರು
ಸಮೃದ್ಧವಾಗಿ ಬೆಳೆಬರು
ಒಕ್ಕತ್ತಿರಿ
ಒಂದು ಹೆಣ್ಣುದೈವದ ಹೆಸರು (ದಕ.ಜಿ)
ಒಕ್ಕತ್ತೆರ
ಬಂಟ ಮನೆತನದ ಹೆಂಗಸು.ಬಂಟ ಮನೆತನದ ಅವಿಭಕ್ತ ಕುಟುಂಬದ ಹಿರಿಯ ಹುಡುಗಿಗೆ ಕೊಡುವ ಬಿರುದು. ಹೆಣ್ಣು ಪ್ರಾಯಕ್ಕೆ ಬಂದ ಕೂಡಲೇ ಅವಳನ್ನು ಮೆರವಣಿಗೆ ಸಮೇತ ಚಪ್ಪರಕ್ಕೆ ಕರೆತಂದು, ಸೊಂಟಕ್ಕೆ ಗೆಜ್ಜೆಕತ್ತಿಯನ್ನು ಕಟ್ಟಿ, ಅವಿಭಕ್ತ ಕುಟುಂಬದ ಮನೆಯ ಬೀಗದ ಕೈಯನ್ನು ಕೊಟ್ಟು, ಆಕೆಯನ್ನು ಕುಟುಂಬದಲ್ಲಿ ಪ್ರಬದ್ಧಳಾದಳೆಂದು ಸಾರುವ ಆಚರಣೆ (ದಕ.ಜಿ)