logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಒ೦ದಾಕು
ಹೊ೦ದಿಸು; ಹೊಂದುಹಾಕು

ಒ೦ದಾಕು
ಸಾರು ಮೇಲೋಗರ ಮೊದಲಾದವಕ್ಕೆ ಕಾಯಿ, ಕಡಲೆ, ಬೆಳ್ಳುಳ್ಳಿ, ಮಸಾಲೆ ಪದಾರ್ಥಗಳನ್ನು ರುಬ್ಬಿ ಸೇರಿಸು (ಮಂಡ್ಯ.ಜಿ)

ಒಂದಾಳುದ್ದ
ಒಬ್ಬ ಮನುಷ್ಯನ ಎತ್ತರವನ್ನು ಹೇಳುವ ಪದ. ಒಬ್ಬ ಮನುಷ್ಯನಷ್ಟು ಎತ್ತರ ಎಂದರೆ ಸುಮಾರು ಐದೂವರೆ ಆರು ಅಡಿಯಷ್ಟು

ಒಂದಾಳುದ್ದ
ಒಬ್ಬ ವ್ಯಕ್ತಿ ನಿಂತು ಬಲಗೈ ಮೇಲೆ ಮಾಡಿದಷ್ಟು ಉದ್ದ

ಒಂದಾಳುದ್ದ ಹೊತ್ತು
ಒಂದು ಆಳಿನ ಎತ್ತರದಷ್ಟು ಉದ್ದವಿರುವ ನೆರಳು; ಸಮಯಸೂಚಿ

ಒ೦ದಿಗೂಟ
ಒ೦ದಿಗೆ ಮಾಡುವ ಊಟ; ಒಂದೇ ಪಂಕ್ತಿಯೂಟ (ಮಂಡ್ಯ.ಜಿ)

ಒಂ‍ದು
ಒಂದು ಎಂಬುದನ್ನು ಸೂಚಿಸುವ ಸಂಖ್ಯಾವಾಚಿ; ಏಕ.
ಅವು ಒಂದನ್ನು ಬಿಟ್ಟು ಇನ್ನೊಂದು ಇರುವುದಿಲ್ಲ. ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗ ಮಗಾ ಅಲ್ಲ

ಒಂ‍ದು
ಸಾರು ಹೊಂದಿಕೊಳ್ಳಲು ಕಲಸಿಬಿಡುವ ಅಕ್ಕಿಯ ಹಿಟ್ಟಿನ ತಿಳಿ,
ಒಂದು ಬಿಟ್ರೆ ಹೊಂದಿಕೊಂಡೆ, ಕಾರ ಬಿಟ್ರೆ ಕದರಿಕೊಂಡೆ (ಗಾದೆ)

ಒಂದುಕಡ್ಡಿ ಭತ್ತ
ಭತ್ತದ ಒಂದು ಪ್ರಭೇದ (ಬಳ್ಳಾ.ಜಿ)

ಒಂದುಪಾದದ ಸೆಣಸಾಟ
ಮಲೆನಾಡಿನ ಗಂಡು ಮಕ್ಕಳ ಆಟ. ಇಬ್ಬರೂ ಒಂಟಿ ಕಾಲಿನಲ್ಲಿ ನಿಲ್ಲಬೇಕು. ಪರಸ್ಪರ ಬಲದ ಕೈಗಳನ್ನು ಮಾತ್ರ ಹಿಡಿದುಕೊಳ್ಳಬೇಕು


logo