logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಐಯ್ನ್‌ಗಂದಾಯ
ವಸೂಲಿ ಮಾಡಿದ ಕಂದಾಯದಲ್ಲಿ ಇತರ ಸುಂಕಗಳನ್ನು ಕಳೆದ ನೇರ ನೆಲಗಂದಾಯ

ಐಯ್ಯಪ್ಪ
ನೋಡಿ- ಅಯ್ಯಪ್ಪ

ಐಯ್ಯಾಚಾರ
ಜಂಗಮ ಯುವಕರಿಗೆ ನೀಡುವ ದೀಕ್ಷಾಕ್ರಿಯೆ (ಗುಲ್ಬ.ಜಿ)

ಐಯ್ವಾದ
ಆಯವಾದ; ಅನುಕೂಲಕರವಾದ (ಶಿವ.ಜಿ)

ಐರಗಡಗ
ಮುತ್ತೈದೆತನದ ಸಂಕೇತವಾಗಿ ತೊಡುವ ಬೆಳ್ಳಿಯ ಕಡಗ (ಮಂಡ್ಯ.ಜಿ).
ತೋಳಿಗೆ ತೋಳಬಾಪುರಿ, ಹಸ್ತಕೆ ಐರಗಡಗ ನೀವು ಮೊದಲಾಗಿ ಕೊಡಬೇಕು

ಐರಣಿ
ಮದುವೆಗಳಲ್ಲಿ ಪೂಜಿಸುವ ಪಂಚಕಲಶ: ಅರಣೆ ಶಾಸ್ತ್ರದ ಮಡಕೆ

ಐರಣಿ
ಮದುವೆಯ ದಿನ ಕುಂಬಾರನ ಮನೆಯಿಂದ ತರುವ ಗಡಿಗೆ: ಕೊಡ.
ಐರ್‍ನಗಡಿಗೆ

ಐರಣಿಊಟ
ಮದುವೆಯಲ್ಲಿ ಐರಣೆ ಗಡಿಗೆಗಳನ್ನು ಪೂಜಿಸಿದಾಗ ನೀಡುವ ಊಟ (ಶಿವ.ಜಿ)

ಐರಣಿದೀಪ
ಐರಣೆ ಗಡಿಗೆಗಳ ಮುಂದೆ ಹಚ್ಚುವ ದೀಪ (ಚಿತ್ರ.ಜಿ)

ಐರಣಿಶಾಸ್ತ್ರ
ಮದುವೆಗೆ ಬೇಕಾದ ಮಣ್ಣಿನ ಕುಡಿಕೆಗಳನ್ನು ಕುಂಬಾರನ ಕೈಯಿಂದ ಪೂಜೆ ಮಾಡಿಸಿಕೊಂಡು ತರುವ ಶಾಸ್ತ್ರ (ಬಳ್ಳಾ.ಜಿ)


logo