logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಈಚಲ/ಈಚಲು
ಫೀನಿಕ್ಸ್ ಎಕಾಲಿಸ್ ಸಿಲ್ವೆಸ್ಟ್ರಿಸ್‌: ತಾಳೆ ಜಾತಿಗೆ ಸೇರಿದ ಬಹೂಪಯೋಗಿ ಮರೆ. ಇದರ ಹಾಲಿನಂತಹ ದ್ರವವನ್ನು ಸೇಂದಿ, ಈಚಲಹೆಂಡ ಎನ್ನುತ್ತಾರೆ. ಇದರ ರಸದಿಂದ ಬೆಲ್ಲ ಮತ್ತು ಕಲ್ಲುಸಕ್ಕರೆ ತಯಾರಿಸುತ್ತಾರೆ. ಈಚಲುಗರಿಗಳಿಂದ ಚಾಪೆ, ತಡಿಕೆ ನೇಯುತ್ತಾರೆ. ಗರಿಯ ಕಡ್ಡಿಗಳಿಂದ ಪೊರಕೆಯನ್ನು ಮಾಡುತ್ತಾರೆ. ಈಡಿಗರಿಗೆ ಪೂಜನೀಯ ವೃಕ್ಷ. ಇರೂ: ಕದಂಬವೃಕ್ಷ; ಸೇಂದಿಗಿಡ (ಚಿತ್ರನೋಡಿ)

ಈಚಲ/ಈಚಲು
ಮಳೆಗಾಲದಲ್ಲಿ ಹುತ್ತದ ಬಳಿ ಅಥವಾ ಸಡಿಲವಾದ ಭೂಮಿಯಿಂದ ಹೊರ ಬೀಳುವ ರೆಕ್ಕೆಹುಳು; ಈಚಲುಳು (ದಕ).

ಈಚಲಕಸಬರ‍್ಗಿ
ಈಚಲು ಗರಿಯಿಂದ ಮಾಡಿರುವಂತಹ ಪೊರಕೆ. ಅಡುಗೆಮನೆ ಹಾಗೂ ದೇವರಕೋಣೆ ಕಸವನ್ನು ಈ ಕಸಬರಿಗಿಯಿಂದ ಗುಡಿಸುವುದಿಲ್ಲ (ಬಳ್ಳಾ.ಜಿ)

ಈಚಲಗರಚಿ
ಧೂಳನ್ನು ಹೊಡೆಯಲು ಈಚಲುಗರಿಯಿಂದ ಮಾಡಿದ ಸಾಧನ

ಈಚಲಪಟ
ಈಚಲುಮರಗಳು ಹೆಚ್ಚಾಗಿರುವ ಕಾಡಿನ ಪ್ರದೇಶ

ಈಚಲಬರ್ಲು
ಈಚಲುಗರಿಯಿಂದ ಮಾಡಿದ ಪೊರಕೆ (ಮೈಸೂ.ಜಿ) ನೋಡಿ- ಈಚಲ ಕಸಬರ‍್ಗಿ.

ಈಚಲಮರದ ಮಜ್ಜಿಗೆ
ಈಚಲು ಮರದಿಂದ ಇಳಿಸಿದ ರಸ; ಮಜ್ಜಿಗೆಯ ಹಾಗೆ ಬೆಳ್ಳಗೆ ಇರುವ ಹೆಂಡ (ಚಿತ್ರ.ಜಿ).
ಸೇಂದಿ; ನೀರಾ; ಸೆರೆ; ಕಳ್ಳು

ಈಚಲಸಬ್ಬೆ
ಈಚಲಕೋಲು. ನೋಡಿ- ಚಬ್ಬೆ

ಈಚಲಹರ
ಈಚಲು ಪೊದೆಗಳಿಂದ ತುಂಬಿದ ಪ್ರದೇಶ; ಕಾಡಿನ ಒಂದು ಪ್ರದೇಶದ ಹೆಸರು

ಈಚಲುಕಟ್ಟು
ಈಚಲು ಮರದ ಗರಿಗಳನ್ನು ಸವರಿ ಆ ಕಡ್ಡಿಯನ್ನು ಸೀಳಿ ತುದಿಗೆ ಗಂಟು ಹಾಕುವುದು (ಚಿಮ.ಜಿ)


logo