logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಈರಣ್ಣಶಾಂಕ್ರಪ್ಪ
ಉತ್ತರ ಕರ್ನಾಟಕದ ರೈತರು ಪೂಜಿಸುವ ದೈವಗಳು (ಬಿಜಾ.ಜಿ)

ಈರತಮುನಿ
ವಿರಕ್ತಮುನಿ (ಚಾಮ.ಜಿ)

ಈರದಹಬ್ಬ
ಮೈಸೂರು ಜಿಲ್ಲೆಯ ತಗಡೂರಿನಲ್ಲಿ ಆಚರಿಸುವ ಹಬ್ಬ

ಈರದಿಮ್ಮಮ್ಮನ ಕಣಿವೆ
ಕೋಲಾರ ಜಿಲ್ಲೆಯ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರದ ನಡುವೆ ಇರುವ ಒಂದು ಕಣಿವೆ

ಈರನಾಗಮ್ಮ
ಕೆಂಡಕೊಂಡ ಪ್ರವೇಶಿಸಿ ಮಹಾಸತಿಯಾದ ವೀರ ನಾಗಮ್ಮ ಎಂಬ ಸ್ತ್ರೀ; ಈಕೆಯನ್ನು ಕುರಿತ ಕಥನಗೀತೆಗಳು ಬಹಳ ಪ್ರಸಿದ್ಧ. (ಬಳ್ಳಾ.ಜಿ)

ಈರನಾರ್
ಒಂದು ಚರ್ಮವಾದ್ಯ;ಅರೆ; ಉರುಮೆ

ಈರಬಡಮ್ಮ
ಗೊಲ್ಲರ ಹೆಣ್ಣು ದೇವತೆ; ಬೊಮೈಲಿಂಗನ ತಂಗಿ

ಈರಬಸವಿ
ವೀರಬಸವಿ

ಈರಬಸವಿ
ದೇವರ ಹೆಸರಿನಲ್ಲಿ ಬಿಟ್ಟ ವೇಶ್ಯ

ಈರಬಸವಿ
ನಡತೆ ಸರಿ ಇಲ್ಲದವಳು


logo