logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಆಂವಿಗಿ
ನೋಡಿ- ಆವುಗೆ

ಆಕರ
ದಾಹ; ಬಾಯಾರಿಕೆ (ಮಲೆ).
ಕಳ್ಳಂಗಡೀಲಿ ಏನಾದ್ರೂ ಕುಡುಕೊಂಡು ಹೋಗಾನೊ, ಬಾಳ ಆಕರ ಆಗ್ತದೆ

ಆಕರಿಕೆಸೊಪ್ಪು
ಹೊಲಗಳಲ್ಲಿ ಬೆಳೆಯುವ ಕಳೆ ಸಸ್ಯ; ಈ ಸೊಪ್ಪಿನ ಪಲ್ಯವನ್ನು ಮಾಡುತ್ತಾರೆ (ಬಳ್ಳಾಜಿ)

ಆಕರ್ಷಣೆಯಾಗು
ದೇವರು ವ್ಯಕ್ತಿಯ ದೇಹದಲ್ಲಿ ಆವಾಹನೆಯಾಗುವುದು; ಪ್ರವೇಶವಾಗು.
ಅವಳ ಮೇಲೆ ಸಿರಿ ದೈವದ ಆಕರ್ಷಣೆಯಾಗುತ್ತದೆ (ದಕ.ಜಿ)

ಆಕಳಂಥವನು
ಬಹಳ ಒಳ್ಳೆಯವನು; ಸರಳ ಸಾಧು ಸ್ವಭಾವದವನು (ಧಾರ.ಜಿ)

ಆಕಳದಾನ
ಗೋದಾನ, ದೋಷ ಅಥವಾ ಸಾವಿನ ಸೂತಕ ಪರಿಹಾರಾರ್ಥವಾಗಿ ಹಾಲು ಕರೆಯುವ ಹಸುವನ್ನು ಕರುವಿನೊಂದಿಗೆ ಬ್ರಾಹ್ಮಣರಿಗೆ ದಾನ ಮಾಡುವ ಸಂಪ್ರದಾಯ

ಆಕಳಪಂಚಮಿ
ಹೋಲದಲ್ಲಿ ಬೆಳೆ ಕುಯ್ಯುವ ಮೊದಲು ಸಲ್ಲಿಸುವ ಪೂಜೆ

ಆಕಳಪಾದ
ಒಂದು ರಂಗೋಲಿ ಚಿತ್ರ; ಎರಡು ಕೈ ಮುಷ್ಟಿಮಾಡಿ ಊರಿ ಇದನ್ನು ಬಿಡಿಸುತ್ತಾರೆ

ಆಕಳಬೀಳು
(ನಾ)
ದನಕರುಗಳು ಮೇಯುವ ಪ್ರದೇಶ; ಗೋಮಾಳ

ಆಕಳಮಕ
ಸಪ್ಪೆಮುಖ


logo