logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಆಣೆವಾರು ಲೆಕ್ಕ
ಹದಿನಾರು ಆಣೆಯ ಪ್ರಮಾಣದ ಆಧಾರದ ಮೇಲೆ ಬೆಳೆಯ ಶೇಕಡಾ ಪ್ರಮಾಣವನ್ನು ಲೆಕ್ಕ ಮಾಡುವಿಕೆ.
ಹೋದ ಸಲ ಹನ್ನೆರಡಾಣೆ ಬೆಳೆ, ಈ ಸಲ ಹದಿನಾರಾಣೆ ಬೆಳೆ

ಆಣ್‌ಕಲ್ಲು
ಹಸಿ ಮಡಿಕೆಯನ್ನು ತಟ್ಟಿ ನಯಗೊಳಿಸಲು ಕುಂಬಾರರು ಬಳಸುವ ಎರಡು ಕಲ್ಲುಗಳಲ್ಲಿ ಮೇಲಿನ ಕಲ್ಲು. ಇದನ್ನು ಗಂಡುಕಲ್ಲು ಎಂದು ಕರೆಯುತ್ತಾರೆ (ದಕ.ಜಿ)

ಆಣ್ವ
ಆಣಿ; ಕಲ್ಲೊತ್ತು (ಮೈಸೂ.ಜಿ)

ಆತರ‍್ಸಿ
ಬೇಗಬೇಗ; ಆತುರಾತುರದಿಂದ

ಆತರ‍್ಸಿ
ಆಸೆಯಿಂದ

ಆತರ‍್ಸಿ
ಬೆಚ್ಚಿದಂತೆ

ಆತುಭೂತ
ಪೀಡೆ; ಪಿಶಾಚಿ; ಭೂತಪ್ರೇತಾದಿಗಳು

ಆದ
ಆಯ್ದ; ಆರಿಸಿದ (ಶಿವ.ಜಿ)

ಆದಕ್ಕಿ
ಕುಟ್ಟಿ ಕೇರಿ ತಳಿಸಿ ಹದ ಮಾಡಿದ ಅಕ್ಕಿ; ಶುದ್ದೀಕರಿಸಿದ ಅಕ್ಕಿ

ಆದರಿ
ನೊಡಿ- ಆದ್ರಿ


logo