logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಆಟಿಕಳೆಂಜ/ಅಟಿಕಳಂಜ
ತುಳುನಾಡಿನ ಒಂದು ದೈವ; ಆಷಾಢ ತಿಂಗಳಿನಲ್ಲಿ ನಲ್ಕೆ ಜನಾಂಗದವರು ಈ ದೈವದ ವೇಷ ಧರಿಸಿ ಮನೆಮನೆಗೆ ಹೋಗಿ ಮಳೆ ಬಂದು ಊರಿಗೆ ಬಂದಿರುವ ಮಾರಿ ದೂರವಾಗಲಿ, ರೋಗಬಾಧೆಯ ನಿವಾರಣೆಯಾಗಲಿ ಎಂಬ ಆಶಯದ ಪಾಡ್ಡನವನ್ನು ಹಾಡಿ ಕುಣಿದು ಅರಶಿನ ಉಪ್ಪು ಮಸಿ ಮೊದಲಾದವುಗಳನ್ನು ಮಂತ್ರಿಸಿ ಎಸೆದು ಹಟ್ಟಿಯ ಜಾನುವಾರುಗಳ ಹಾಗೂ ಮನೆ ಮಂದಿಯ ಅನಿಷ್ಟ ನಿವಾರಣೆ ಮಾಡುವ ಆಚರಣೆ (ದಕ.ಜಿ)

ಆಟಿಕುಳಿತುಕೊಳ್ಳುವುದು
ಮದುವೆಯಾದ ಹೆಣ್ಣು ಆಟಿ ತಿಂಗಳಲ್ಲಿ ತವರು ಮನೆಗೆ ಹೋಗುವುದು (ದಕ.ಜಿ)

ಆಟಿನಅಗೆಲ್
ತೀರಿಹೋದ ಹಿರಿಯರಿಗೆ ಆಟಿ ತಿಂಗಳಲ್ಲಿ ಎಡೆ ಇಡುವುದು (ದಕ.ಜಿ)

ಆಟಿಬಾಳ
ಒಂದು ಔಷಧೀಸಸ್ಯ

ಆಟುಕಳ್ಳ
ಲಫಂಗ; ಪೋಲಿ; ಒಂದು ಬೈಗುಳ. ಇರೂ: ಆಟ್ಕಾಳ; ಆಟ್ಗಳ್ಳ (ಚಾಮ.ಜಿ) ನೋಡಿ-ಅಟ್ಗುಳಿ

ಆಟ್ಗುಳಿ
ಮಕ್ಕಳಾಟಿಕೆ

ಆಟ್ಗುಳಿ
ಮಳೆ ಬರದಿದ್ದಾಗ ಮಾಡುವ ಒಂದು ಆಚರಣೆ (ಚಾಮ.ಜಿ) ನೋಡಿ- ಅಟ್ಗುಳಿ

ಆಟ್ಹಾಕೋದು
(ಕ್ರಿ)
ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು

ಆಠವಾರಿ ಸೀರೆ
ಹದಿನಾರು ಮೊಳದ ಸೀರೆ

ಆಡ
(ನಾ)
ಅಡರು


logo