logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಆಟದ ಕಾಡ್ಯನ ಮನೆ
ಕಾಡ್ಯನಾಟದ ಪ್ರದರ್ಶನದಲ್ಲಿ ಹೆಣ್ಣು ಸರ್ಪದ ಮನೆಯೆಂದು ಪರಿಗಣಿಸಲ್ಪಟ್ಟ ಮನೆ; ಇಲ್ಲಿ ಮಾತ್ರ ಕಾಡ್ಯನಾಟ ಪ್ರದರ್ಶನ ನಡೆಸಲಾಗುತ್ತದೆ (ದಕ.ಜಿ)

ಆಟಪಿಟ
ಮೋಸಗಾರ; ಕಪಟ (ಮೈಸೂ.ಜಿ)

ಆಟಲಾಟಮ್ಮ
ಅಮ್ಮ ರೋಗದ ಒಂದು ವಿಧ; ಮೈಮೇಲೆ ಗುಳ್ಳೆಗಳಿರುತ್ತವೆ ಜ್ವರ ಇರುವುದಿಲ್ಲ. ಈ ಅಮ್ಮ ಸಾಮಾನ್ಯವಾಗಿ ಮಕ್ಕಳಿಗೆ ಹೆಚ್ಚಾಗಿ ಬರುತ್ತದೆ. ಅಮ್ಮನು ಹೋಗುವವರೆಗೂ ಮಕ್ಕಳು ಯಾವುದೇ ತೊಂದರೆ ಇಲ್ಲದೆ ಆಡಿಕೊಂಡೇ ಇರುತ್ತಾರೆ.
ದಡಾರ (ಕೋಲಾ.ಜಿ)

ಆಟಾಳು
ಎತ್ತರವಾಗಿರುವವನು

ಆಟಾಳು
ಆಟ ಆಡುವ ಆಳು

ಆಟಾಳು
ಸೋಮಾರಿ

ಆಟಾಳು
ಕೆಳದರ್ಜೆಯ ಸೇವಕ; ಕೀಳಾಳು (ಬೆಂಗ್ರಾ.ಜಿ)
ಆಟಾಳ್ಗೊಂದು ಮೋಟಾಳು ಮೋಟಾಳ್ಗೊಂದು ಮೊಣಸಟ್ಗ

ಆಟಿ
ಆಷಾಢಮಾಸ

ಆಟಿ
ಮಳೆಗಾಲ

ಆಟಿ
ಹುಣ್ಣಿಮೆ (ದಕ.ಜಿ).
ಆಟಿಯಲ್ಲಿ ತುಂತುರುಮಳೆ ಬೀಳುತ್ತದೆ
ಆಷಾಡ.


logo