ಜಾನುವಾರುಗಳ ಕೊರಳಿಗೆ ಕಟ್ಟುವ ದಪ್ಪನೆಯ ಹಗ್ಗದ ಸಲಕರಣೆ. ಇದು ಸುಮಾರು ಒಂದೂವರೆಯಿಂದ ಎರಡಂಗಲ ದಪ್ಪವಿದ್ದು, ಇದನ್ನು ಚರ್ಮ, ರಕ್ಕಸಬಳ್ಳಿಯ ನಾರು, ಮಂಡೆನಾರು ಮೊದಲಾದುವುಗಳಿಂದ ಹೆಣೆದು, ಎತ್ತುಗಳ ಕೊರಳ ಕೆಳಭಾಗಕ್ಕೆ ಸರಿಹೊಂದುವಂತೆ ಹೆಗ್ಗೆಜ್ಜೆಯೊಂದನ್ನು ಕಟ್ಟಿರುತ್ತಾರೆ
ಅಂಗಡಿ/ಅಂಗಾಡಿ/ಅಂಗ್ಡಿ
ವಸ್ತುಗಳನ್ನು ಮಾರುವ ಸ್ಥಳ; ವ್ಯಾಪಾರದ ಮಳಿಗೆ.
ಅಂಗ್ಡಿಲಿ ವ್ಯಾಪಾರ ಮಾಡ್ಕಂಡಿದ್ರು ಹಿರಿಯರಿಬ್ರು
ಅಂಗಡಿ/ಅಂಗಾಡಿ/ಅಂಗ್ಡಿ
ದೂಪೆಯ ನಾಲ್ಕು ಮೂಲೆಗಳಲ್ಲಿ ಕಂಬ ಹಾಕಿ ಮಾಡುವ ಅಲಂಕಾರಿಕ ರಚನೆ (ದಕ.ಜಿ)
ಅಂಗಡಿಕೋಲು
ಕೋಲಾಟದ ಒಂದು ಗತ್ತು. ಎಂಟೆಂಟು ಮಂದಿ ಎರಡು ಗುಂಪಾಗಿ ನಿಂತುಕೊಂಡು ಪ್ರತ್ಯೇಕವಾಗಿ ಸುತ್ತುತ್ತಾರೆ. ಮೊದಲನೇ ಗುಂಪಿನ ಕೊನೆಯ ವ್ಯಕ್ತಿ ಎರಡನೇ ಗುಂಪಿನ ಕೊನೆಯವಸಿಗೆ ಕೋಲು ಕೊಡುತ್ತಿರುತ್ತಾನೆ. ಗುಂಪು ಸುತ್ತುತ್ತಿರುವುದರಿಂದ ಎರಡು ಕೊನೆಗಳಲ್ಲಿ ಪ್ರತಿಯೊಬ್ಬರೂ ಸಂಧಿಸುತ್ತಿದ್ದು ಯಾರು ಎಲ್ಲೆಲ್ಲಿ ಸರಿಯುತ್ತಾರೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ
ಅಂಗಡಿಮುಂಗಟ್ಟು
ಅಂಗಡಿ ಮತ್ತು ಸಾಮಾನು.
ಅಂಗಡಿ ಮುಂಗಟ್ಟುಗಳೆಲ್ಲ ಮುಚ್ಚಿದಾರೆ.
ಅಂಗಡಿಹಕ್ಕಿ
ಗುಬ್ಬಚ್ಚಿ (ಮಂಗ.ಜಿ)
ಅಂಗಣ
ಮನೆಯ ಮುಂದಿನ ಬಯಲು; ಅಂಗಳ
ಅಂಗಣ
ದೇವಸ್ಥಾನದ ಸುತ್ತಲಿನ ಪ್ರಾಂಗಣ
ಅಂಗಣಬಲಿ
ಭೂತದ ಅಂಗಳದಲ್ಲಿನ ಪ್ರದಕ್ಷಿಣೆ ಕುಣಿತ (ದಕ.ಜಿ)
ಅಂಗಣಬಲಿ
ಮಾರಿಹಬ್ಬದಲ್ಲಿ ದೇವಸ್ಥಾನದ ಅಂಗಳದಲ್ಲಿ ನಡೆಯುವ ಸಮೂಹ ಕುಣಿತ