(ಪ್ರಾ) ಕಾಡುಪಾಪವನ್ನು ಹೋಲುವ ಪ್ರಾಣಿ. ಪಶ್ಚಿಮ ಆಫ್ರಿಕದ ಉಷ್ಣವಲಯ ಕಾಡುಗಳಲ್ಲಿ ವೃಕ್ಷವಾಸಿ. ಬಾಲವಿದೆ
angwantibo
ಅಂಚಲ
(ಭೌ) ಬೆಳಕಿನ ವ್ಯತಿಕರಣದಿಂದ ಅಥವಾ ವಿವರ್ತನದಿಂದ ರೂಪುಗೊಂಡ ಕತ್ತಲೆ-ಬೆಳಕು ಪಟ್ಟೆಗಳ ಶ್ರೇಣಿಯಲ್ಲಿ ಯಾವುದೇ ಒಂದು ಪಟ್ಟೆ. ಅಂಚು
fringe
ಅಂಚು
(ಸ) ಎಲೆ ದಳದ ವಿಸ್ತೃತ ಮೇಲ್ಭಾಗ.
fringe
ಅಂಚು
(ಖ) ಆಕಾಶಕಾಯಗಳ, ವಿಶೇಷವಾಗಿ ಸೂರ್ಯ ಚಂದ್ರರ, ಗೋಚರ ಬಿಂಬಗಳ ಸರಹದ್ದು
limb
ಅಂಚು
(ಭೂ) ನೀರ ಹರಹಿನ ಸುತ್ತಲ ಎಲ್ಲೆ.
margin
ಅಂಚು
(ತಂ) ಚಕ್ರದ ಗುಂಬಕ್ಕೆ ಅರಗಳ ಮೂಲಕ ಸಂಯೋಜಿತವಾದ ಹೊರಭಾಗ. ಪಾತ್ರೆ ಬಾಯಿಯ ಹೊರಸುತ್ತು
rim
ಅಂಚುಕಲ್ಲು
(ಎಂ) ರಸ್ತೆಯ ಅಂಚಿನಲ್ಲಿ ಉದ್ದಕ್ಕೂ ಸಾಲಾಗಿ ನೆಡುವ ಕಲ್ಲು. ಮುಖ್ಯವಾಗಿ ರಾತ್ರಿ ವೇಳೆ ರಸ್ತೆಯ ಅಂಚನ್ನು ಗುರುತಿಸಲು ಸಹಾಯಕವಾಗುವುದಲ್ಲದೆ, ವಾಹನಗಳ ಓಟದ ಪ್ರಭಾವದಿಂದಾಗಿ ರಸ್ತೆಯು ಅಂಚಿನಲ್ಲಿ ಹರಡಿಕೊಳ್ಳದಂತೆ, ಕುಸಿಯದಂತೆ ರಕ್ಷಿಸುತ್ತದೆ. ಇದಕ್ಕೆ ಕಾಂಕ್ರೀಟೂ ಬಳಕೆಯಲ್ಲಿದೆ
kerb
ಅಂಜೂರ
(Ficus carica) (ಸ) ಮೊರೇಸೀ ಕುಟುಂಬಕ್ಕೆ ಸೇರಿದ ಮರ. ಏಷ್ಯ ಮೈನರ್ ನಲ್ಲಿರುವ ಕ್ಯಾರಿಕ ಇದರ ತವರು. ಇದರ ಹಣ್ಣುಗಳಲ್ಲಿ ಅನೇಕ ಪೋಷಕಾಂಶಗಳಿವೆ. ಹಣ್ಣಿನಲ್ಲಿ ಶೇ. ೮೪ ಭಾಗ ತಿರುಳು. ಕಬ್ಬಿಣ, ತಾಮ್ರ ಮತ್ತು ಎ,ಬಿ,ಸಿ,ಡಿ ವೈಟಮಿನ್ಗಳು ಹೇರಳವಾಗಿವೆ
fig
ಅಂಟು ತುದಿಗಳು
(ವೈ) ನಿರ್ಬಂಧಿತ ಕಿಣ್ವಗಳಿಂದ ತುಂಡರಿಸಿದ ಡಿಎನ್ಎ ಅಣುವಿನ ಅಂಟು ತುದಿ. ಇಂತಹ ತುದಿಗಳನ್ನು ಅದೇ ನಿರ್ಬಂಧಿತ ಕಿಣ್ವ ಬಳಸಿ ತುಂಡರಿಸಿದ