(ಜೀ) ವಿಶೇಷವಾಗಿ ಕೆಲವು ಯೀಸ್ಟ್ಗಳಲ್ಲಿ ಅಲೈಂಗಿಕ ಸಂತಾನೋತ್ಪಾದನೆ. ಕೆಲವು ಹಣ್ಣು ಮರಗಳಲ್ಲಿ ಹಾಗೂ ಅಲಂಕಾರ ಸಸ್ಯಗಳಲ್ಲಿ ಮಾಡಲಾಗುವ ಅಂಕುರ ಕಸಿ. ಅಲೈಂಗಿಕ ಸಂತಾನೋತ್ಪಾದನೆಯ ಒಂದು ಆದಿಮ ವಿಧಾನ
budding
ಅಂಕುರಣ
(ಸ) ಸಸ್ಯದ ಬೀಜದಿಂದ/ಬೇರಿನಿಂದ ಮೊಳಕೆ ಒಡೆಯುವುದು. ಚಿಗುರುವುದು, ಕೊನರುವುದು, ಕುಡಿಯೊಡೆಯುವುದು
sprouting
ಅಂಕುರತ್ವೀಕರಣ
(ಸ) ಮೊಳಕೆಯೊಡೆದ ಬೀಜಗಳು ಇಲ್ಲವೇ ಬೀಜಕಗಳು ಶೀಘ್ರವಾಗಿ ಬೆಳೆದು ಹೂ ಬಿಡುವಂತೆ ಮಾಡಲು ಶೈತ್ಯ ಸಂಸ್ಕಾರದ (ಸುಮಾರು ೪0 ಸೆ) ಅನ್ವಯ. ಚಳಿಗಾಲದ ಧಾನ್ಯಗಳನ್ನೂ ಒಳಗೊಂಡಂತೆ ಅನೇಕ ಸಸ್ಯಗಳನ್ನು ಅವುಗಳ ಪ್ರಾರಂಭ ಅಭಿವರ್ಧನೆಯ ವೇಳೆ ಇಂಥ ಸಂಸ್ಕಾರಕ್ಕೆ ಒಳಪಡಿಸಿದಲ್ಲಿ ಅವು ಶೀಘ್ರವಾಗಿ ಹೂ ಬಿಡುತ್ತವೆ
vernalization
ಅಂಕುರ ಪದರ
(ಜೀ) ನೋಡಿ: ಜರ್ಮ್ ಲೇಯರ್
germ layer
ಅಂಕುರಫಲೀಯ
(ಸ) ಬೀಜಾವರಣದ ಒಳಗಿರುವಾಗಲೇ ಬೆಳೆಯುವುದಕ್ಕೆ ಆರಂಭವಾಗುವ
blastocarpus
ಅಂಕುರಬೀಜಕ
(ಸ) ಅಂಕುರಣದ ವೇಳೆ ಮೈದಳೆಯುವ ಬೀಜಕ
blastospore
ಅಂಕುಶಕಪಾಲಿ
(ಪ್ರಾ) ಮುಳ್ಳು ತಲೆ ಮತ್ತು ಸೊಂಡಿಲಿದ್ದು ಬಾಯಿ ಮತ್ತು ಆಹಾರನಾಳ ಇರದ ಪರಪುಷ್ಟ ಪ್ರಾಣಿ
acanthocephalia
ಅಂಕೆ
(ಗ) ಸಂಖ್ಯೆಯನ್ನು ನಿರೂಪಿಸುವ ಪ್ರತೀಕ. ಉದಾ : ೦,೧,೨,೩,೪,೫,೬,೭,೮,೯. ಅಂಕಿ
numeral
ಅಂಕೆ ಅಂಶಗಳು
(ಸಂ) ಯಾವುದೇ ವಿದ್ಯಮಾನವನ್ನು ಕುರಿತ ಸಂಖ್ಯಾರೂಪದ ಮಾಹಿತಿ. ಉದಾ: ಭಾರತದ ಆಮದು-ರಫ್ತುಗಳ ಕುರಿತು ಕಳೆದ ೧೦ ವರ್ಷಗಳ ವಿವರ. ಅಂಕಿ ಅಂಶಗಳು
facts and figures
ಅಂಗ
(ಜೀ) ವಿಶೇಷ ರಚನೆಯುಳ್ಳದ್ದಾಗಿ, ವಿಶೇಷ ಕಾರ್ಯನಿರ್ವಹಿಸುವ ಮೂಲಕ ಇತರ ಭಾಗಗಳಿಂದ ಸ್ಪಷ್ಟವಾಗಿ ಮತ್ತು ಪ್ರತ್ಯೇಕವಾಗಿ ಎದ್ದುಕಾಣುವ ಪ್ರಾಣಿ/ಸಸ್ಯ ಶರೀರದ ಒಂದು ಭಾಗ. ಉದಾ: ಸಸ್ಯಗಳಲ್ಲಿ ಬೇರು, ಎಲೆ, ಹೂ ಹಾಗೂ ಪ್ರಾಣಿಗಳಲ್ಲಿ ಕಿವಿ, ಕಣ್ಣು, ಶ್ವಾಸಕೋಶಗಳು, ಮೂತ್ರಪಿಂಡಗಳು, ಹೃದಯ ಇತ್ಯಾದಿ. ನಿರ್ದಿಷ್ಟ ಅಂಗ. ಅನೇಕ ಭಿನ್ನ ಭಿನ್ನ ಊತಕಗಳಿಂದ ಕೂಡಿರುತ್ತದೆ