logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಅಂಟ್ವಾಳ
ಬಟ್ಟೆ ತೊಳೆಯಲು ಉಪಯೋಗಿಸುವ ನೊರೆ ಬರುವ ಕಾಯಿ, ಜಾನುವಾರುಗಳು ಕಾಯನ್ನು ತಿನ್ನುತ್ತವೆ.

ಅಂಟಿಸು
ಹಚ್ಚು, ಅಂಟಿಕೊಳ್ಳವಂತೆ ಮಾಡು.

ಅಂಟ್ಗಿ-ಪಂಟ್ಗಿ
ಮಲೆನಾಡಿನ ವೈಶಿಷ್ಟ್ಯಗಳಲ್ಲೊಂದು, ದೀಪಾವಳಿಯಲ್ಲಿ ಮನೆ ಮನೆಗೆ ಹೋಗಿ, ಹಾಡುತ್ತಾ ಜ್ಯೋತಿಯನ್ನು ನೀಡುವ ಜಾನಪದ ಮೇಳ.

ಅಂಟು
ಜಿಗುಟು, ಮುಟ್ಟಿದರೆ ಅಂಟಿಕೊಳ್ಳುವ ವಸ್ತು.

ಅಂಟು ಪುರ್ಲೆ
ಮುಟ್ಟಿದರೆ ಅಂಟಿಕೊಳ್ಳುವ ತೆನೆಯುಳ್ಳ ಒಂದು ಬಗೆಯ ಹುಲ್ಲು / ಗಿಡ

ಅಂಟ್ರೋಗ
ಅಂಟುರೋಗ, ಒಬ್ಬರಿಂದೊಬ್ವರಿಗೆ ಹರಡುವ ಜಾಡ್ಯ.

ಅಂಡ ಚಂಡಾಳ
ಚೇಷ್ಟೆ, ಕುಯುಕ್ತಿ

ಅಂಡ ಚಂಡಾಳ
ಕುಯುಕ್ತಿ ಮಾಡುವವನು.

ಅಂಡಲ್ಲಿ
ಅಡಿಯಲ್ಲಿ, ತಳದಲ್ಲಿ, ಕೆಳಗೆ.

ಅಂಡಲೆ
ಸುಮ್ಮನೆ ಕೆಲಸ ಕಾರ್ಯವಿಲ್ಲದೆ ಓಡಾಡುವುದು.


logo