logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Tulu-Kannada)

ಕಪ್ಟಲ್
(ನಾ)
ದನಗಳಿಗೆ ಅಕ್ಕಚ್ಚು ಹಾಕಿಡುವ ದೊಡ್ಡ ಮಣ್ಣಿನ ಪಾತ್ರೆ ಬಾನಿ, ಭತ್ತಿದಿಂದ ಅಕ್ಕಿ ತೆಗೆಯುವ ಪ್ರಕ್ರಿಯೆಯ ಮೊದಲ ಹಂತದಲ್ಲಿ ಭತ್ತವನ್ನು ನೆನೆಹಾಕಲು ಬಳಸುವ ದೊಡ್ಡ ಪಾತ್ರೆ. A broad mouthed vessel. A big earthen vessel to store drinking water for cattle.

ಕಾರ್ ದ ಕಡ್ಯ
(ನಾ)
ಇದು ಸಾಮಾನ್ಯವಾಗಿ ಕೊಡಪಾನದಂತಿದ್ದು ಅಡಿಭಾಗದಲ್ಲಿ ಮಣ್ಣಿನ ಪಟ್ಟಿ ಇರುತ್ತದೆ. ಇದನ್ನು ಮನೆಯಲ್ಲಿ ನೀರು ತುಂಬಿಡಲು ಬಳಸುತ್ತಾರೆ. ಇದರಲ್ಲಿ ಹಾಕಿಟ್ಟ ನೀರು ತಣ್ಣಗಿರುವದರಿಂದ ಸೆಕೆಗಾಲದಲ್ಲಿ ಇದರ ಬಳಕೆ ಅಧಿಕ.

ಕಿನ್ನಿ ಬಿಸಲೆ
(ನಾ)
ತಿಂಡಿ ತಿನಿಸುಗಳಿಗೆ ಒಗ್ಗರಣೆ ಹಾಕಲು ಅಲ್ಪ-ಸ್ವಲ್ಪ ತರಕಾರಿ ಪಲ್ಯ ತಯಾರಿಸಲು ಬಳಸುತ್ತಿದ್ದ ಚಿಕ್ಕ ಪಾತ್ರೆ.

ಕುಜಿಲ್
(ನಾ)
ಇದು ವಿಶೇಷವಾಗಿ ತಾಳೆಯ ಮರದಿಂದ ಕಳ್ಳು ತೆಗೆಯಲು ಉಪಯೋಗಿಸುವ ಪಾತ್ರೆ. ಇದು ದುಂಡಗಿದ್ದು ಸಾಗಾಟಕ್ಕೆ ಅನುಕೂಲವಾಗಿರುತ್ತದೆ.

ಕುದುಪೆ
(ನಾ)
ಹಾಲು ಬಿಸಿ ಮಾಡಲು ಬಳಸುತ್ತಿದ್ದ ಸಣ್ಣ ಗಾತ್ರದ ಮಣ್ಣಿನ ಪಾತ್ರೆ. ಹಾಲಿನ ಚಟಿಗಿ, ಮೊಸರಿನಿಂದ ಬೆಣ್ಣೆ ತೆಗೆಯಲು ಇದನ್ನೇ ಬಳಸುತ್ತಿದ್ದರು.

ಕೋರಯಿ
(ನಾ)
ಇದು ಅಗಲವಾದ ಕಡಿಮೆ ಆಳದ ಪಾತ್ರೆ, ಅಕ್ಕಿಯನ್ನು ತೊಳೆಯಲು ಮತ್ತು ಅಕ್ಕಿಯಲ್ಲಿ ಬೆರೆತಿರುವ ಕಲ್ಲು, ಹೊಯ್ಗೆಯನ್ನು ಬೇರ್ಪಡಿಸಲು ಬಳಸುವ ಪಾತ್ರೆ.

ಗಟ್ಟಣೆ
(ನಾ)
ಹಸಿಮಡಕೆಯನ್ನು ಕಲ್ಲು, ಸೊಳದಿಂದ ತಟ್ಟುವುದು.

ಗುಂಡಿ ಬಿಸಲೆ
(ನಾ)
ಸಾರು, ತೋವೆ ಮತ್ತು ತರಕಾರಿ ಪಲ್ಯ ತಯಾರಿಸಲು ಉಪಯೋಗಿಸುವ ಪಾತ್ರೆ, ಆಳವಾಗಿರುತ್ತದೆ.

ಚಟ್ಟಿ
(ನಾ)
ಹೂಕುಂಡ, ಹೂದಾನಿ, ಕನ್ನಡದಲ್ಲಿ ಕೊಡ ಚಟ್ಟಿ ಎನ್ನುವ ಪದ ಬಳಕೆಯಲ್ಲಿದೆ. ಮನೆಯ ಹಾಗೂ ಕಟ್ಟಡಗಳ ಹೊರ ಅಲಂಕರಣಕ್ಕಾಗಿ ಹೂಗಿಡಗಳನ್ನು ನೆಡುವ ಪಾತ್ರೆ.

ಗುರ್ಕೆ
(ನಾ)
ಗುಡಾಣ, ಹರಿವೆ, ಪಡಗ


logo