logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Tulu-Kannada)

ಪಲ್ಲಯಿ/ಗದ್ದವು
(ನಾ)
ಹಳೆಯ ಕಾಲದ ಊಟದ ಬಟ್ಟಲು. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಬಾಣಂತಿಯರು ಊಟ ಮಾಡಲು ಮಣ್ಣಿನ ಬಟ್ಟಲನ್ನೇ ಉಪಯೋಗಿಸುವರು. ದೊಡ್ಡ ಗಾತ್ರದ ಬಟ್ಟಲನ್ನು 'ಪಲ್ಲಯಿ' ಎಂದು ಚಿಕ್ಕ ಗಾತ್ರದ ಬಟ್ಟಲನ್ನು 'ಗದ್ದವು' ಎನ್ನುವುದು ವಾಡಿಕೆ. ಚಿಕ್ಕಮಕ್ಕಳಿಗೆ ಗಿಡಮೂಲಿಕೆ ಮದ್ದನ್ನು ಹಾಕಿ ಅರೆದು ಕುಡಿಸಲು ಕೂಡ ಉಪಯೋಗಿಸುತ್ತಿದ್ದರು.

ಪುಡಯಿ
(ನಾ)
ಬಳ್ಳಿಯಿಂದ ಮಾಡಿದ ದೊಡ್ಡ ಪುಟ್ಟ ಚಿಕ್ಕ ಮಡಕೆಗಳನ್ನು ಅದರಲ್ಲಿಟ್ಟು ಕುಂಬಾರರು ಹೊತ್ತುಮಾರುವರು.

ಪೊಲಿ
(ನಾ)
ಸೊಳ, ಮಡಕೆ ತಟ್ಟುವ ಕಟ್ಟಿಗೆಯ ಸಾಧನ.


logo