logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Tulu-Kannada)

ಕರ
(ನಾ)
ಅನ್ನ ಬೇಯಿಸುವ ಪಾತ್ರೆ, ಇದು ಅಗೋಳಿಗಿಂತ ಚಿಕ್ಕದು. ಸಣ್ಣ ಮತ್ತು ಅತಿ ಸಣ್ಣ ಕುಟುಂಬಗಳನಲ್ಲಿ ಈ ಪಾತ್ರೆಯನ್ನು ಹೆಚ್ಚಾಗಿ ಬಳಸುತ್ತಿದ್ದರು.

ಕಡ್ಯ
(ನಾ)
ಕಂದೆಲ್, ಕೊಡ ಬಿಂದಿಗೆ, ಚಿಕ್ಕ ಬಾಯಿಯ ಈ ದುಂಡಗಿನ ಪಾತ್ರೆಯನ್ನು ತೆಂಗಿನಗಿಡಕ್ಕೆ ನೀರು ಹಾಕಲು ಬಳಸುತ್ತಿದ್ದರು.

ಕದಿಗೆ ಕದಿಕ್ಕೆ
(ನಾ)
ದೇವರಿಗೆ ಹರಕೆ ಹಾಕಲಿಕ್ಕಾಗಿ ಇಟ್ಟ ಒಂದು ಬಗೆಯ ಪಾತ್ರೆ, ಮಡಕೆ ಕಾಣಿಕೆ ಡಬ್ಬ ಗಡಗಿ.

ಕನ್ನಟಿ ಓಡ್
(ನಾ)
ಕನ್ನಡಿ ಹೆಂಚು, ಬೆಳಕಿನ ಹೆಂಚು, A kind of tile having glass in the middle for the proper illumination of the house.

ಕನ್ನೆಗಡ್ಡೆ
(ನಾ)
ಕುಂಬಾರಿಕೆಯ ಮಣ್ಣು

ಕಪ್ಟರ್
(ನಾ)
ಮಡಕೆತುಂಡು, ಕಾವಲಿಯಾಗಿ ಉಪಯೋಗಿಸುವ ಒಡೆದ ಮಡಕೆಯ ಭಾಗ

ಕಪ್ಪರ್ ರೊಟಿ
(ನಾ)
ಓಡು ರೊಟ್ಟಿ, ಮಣ್ಣಿನ ಹಂಚಿನಲ್ಲಿ ಮಾಡಿದ ರೊಟ್ಟಿ A kind of bread baked in pot sherd.

ಕಪ್ಟಲ್
(ನಾ)
ದನಗಳಿಗೆ ಅಕ್ಕಚ್ಚು ಹಾಕಿಡುವ ದೊಡ್ಡ ಮಣ್ಣಿನ ಪಾತ್ರೆ ಬಾನಿ, ಭತ್ತಿದಿಂದ ಅಕ್ಕಿ ತೆಗೆಯುವ ಪ್ರಕ್ರಿಯೆಯ ಮೊದಲ ಹಂತದಲ್ಲಿ ಭತ್ತವನ್ನು ನೆನೆಹಾಕಲು ಬಳಸುವ ದೊಡ್ಡ ಪಾತ್ರೆ. A broad mouthed vessel. A big earthen vessel to store drinking water for cattle.

ಕಾರ್ ದ ಕಡ್ಯ
(ನಾ)
ಇದು ಸಾಮಾನ್ಯವಾಗಿ ಕೊಡಪಾನದಂತಿದ್ದು ಅಡಿಭಾಗದಲ್ಲಿ ಮಣ್ಣಿನ ಪಟ್ಟಿ ಇರುತ್ತದೆ. ಇದನ್ನು ಮನೆಯಲ್ಲಿ ನೀರು ತುಂಬಿಡಲು ಬಳಸುತ್ತಾರೆ. ಇದರಲ್ಲಿ ಹಾಕಿಟ್ಟ ನೀರು ತಣ್ಣಗಿರುವದರಿಂದ ಸೆಕೆಗಾಲದಲ್ಲಿ ಇದರ ಬಳಕೆ ಅಧಿಕ.

ಕಿನ್ನಿ ಬಿಸಲೆ
(ನಾ)
ತಿಂಡಿ ತಿನಿಸುಗಳಿಗೆ ಒಗ್ಗರಣೆ ಹಾಕಲು ಅಲ್ಪ-ಸ್ವಲ್ಪ ತರಕಾರಿ ಪಲ್ಯ ತಯಾರಿಸಲು ಬಳಸುತ್ತಿದ್ದ ಚಿಕ್ಕ ಪಾತ್ರೆ.


logo