logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Tulu-Kannada)

ತಗೋರಿ
(ನಾ)
ತಿಗುರಿ, ಕುಂಬಾರನ ಚಕ್ರ, ವಿದ್ಯುತ್ ಚಾಲಿತ ಚಕ್ರಗಳು ಬಂದಿವೆ. ಮರದ ಮತ್ತು ಮಣ್ಣಿನ ತಿಗುರಿಯ ಬಳಕೆ ಈಗಲೂ ಇದೆ.

ತಟ್ಟಿ ಬಿಸಲೆ
(ನಾ)
ಇದು ಗಾತ್ರದಲ್ಲಿ ಚಿಕ್ಕದಾಗಿದ್ದು ಅಗಲವಾದ ಬಾಯಿಯನ್ನು ಹೊಂದಿರುತ್ತದೆ.ಮೀನು ಮಾಂಸದ ಅಡುಗೆ ಪಾತ್ರೆಯಾಗಿ ವಿಶೇಷವಾಗಿ ಉಪಯೋಗಿಸುವರು.

ತಂದೂರ್ ರೊಟ್ಟಿ
(ನಾ)
ಇದು ತುಳುವಿಗೆ ಬೇರೆ ಭಾಷೆಯಿಂದ ಬಂದದ್ದು, ತಂದೂರಿ

ತಿಬಿಲೆ
(ನಾ)
ಹಣತೆ, ಪ್ರಣತಿ, ದೀಪಾವಳಿ, ಹಾಗೂ ಕಾರ್ತೀಕ ಮಾಸದಲ್ಲಿ ದೀಪ ಹಚ್ಚಲು ಪ್ರಣತಿಯನ್ನು ಹೆಚ್ಚಾಗಿ ಬಳಸುವರು.

ತೂರಿ
(ನಾ)
ಇದು ದೇವಸ್ಥಾನಗಳಲ್ಲಿ ಪೂಜಾವಿಧಿಗಳಿಗೆ ಬಳಸುವ ಕಲಶ ಶವ ಸಂಸ್ಕಾರದ ಸಮಯದಲ್ಲಿ ಶ್ರೀಮಂತರಿಂದ ಬಡವರವರೆಗೆ ಉಪಯೋಗಿಸುವ ಮಣ್ಣಿನ ಮಡಕೆ ಎಂದರೆ "ತೂರಿ" ಇದನ್ನು ಮುಗಯಿ ಎಂದು ಕರೆಯುವರುಂಟು.
">

ತಿಪ್ಪಿ (ಗೆರಟೆ)
(ನಾ)
ಅರೆ ಒಣಗಿದ ಮಡಕೆಗಳನ್ನು ನಯಗೊಳಿಸಲು ಗೆರೆಟೆಯಿಂದ ಉಜ್ಜುವರು. ತೆಂಗಿನ ಚಿಪ್ಪನ್ನು ಇದಕ್ಕಾಗಿ ಉಪಯೋಗಿಸುವರು.


logo