logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Tulu-Kannada)

ಅಗೋಳಿ
(ನಾ)
ಅನ್ನ ಬೇಯಿಸಲು ಉಪಯೋಗಿಸುತ್ತಿದ್ದ ದೊಡ್ಡ ಪಾತ್ರೆ, ವೃತ್ತಾಕಾರದ ಬಾಯಿಯುಳ್ಳ ದುಂಡಗಿನ ಪಾತ್ರೆ, ಇದರಲ್ಲಿ ದೊಡ್ಡ ಮತ್ತು ಸಣ್ಣ ಗಾತ್ರದ ಪಾತ್ರೆಗಳಿರುತ್ತವೆ.

ಅಡ್ಯರ
(ನಾ)
ಗಂಜಿಯಿಂದ ಗಂಜಿನೀರನ್ನು (ತಿಳಿ) ಬೇರ್ಪಡಿಸಿ ಅನ್ನ ಮಾಡಲು ಉಪಯೋಗಿಸುವ ಪಾತ್ರೆ. ಗಾತ್ರದಲ್ಲಿ ಚಿಕ್ಕದು. ಅಡಿ ಇರುವ ಮಣ್ಣಿನ ಪಾತ್ರೆ.

ಅರ್-ಮಣ್ಣು
(ನಾ)
ಕಂಚಿನ ಎರಕಕ್ಕೆ ಅಚ್ಚು ತಯಾರಿಸಲು ಗುಂಡುಕಲ್ಲಿನಿಂದ ಅರೆದು ಪಾಕ ಭರಿಸಿದ ಮಣ್ಣು.

ಅರಿಯ
(ನಾ)
ಮಣ್ಣಿನಿಂದ ತಯಾರಿಸಿದ ಚಿಕ್ಕ ಪಾತ್ರೆ, ಕುಡಿಕೆ A small earthen vessel

ಅಲೆ
(ಕ್ರಿ)
ಗುಂಡುಕಲ್ಲಿನಿಂದ ಮಡಕೆಯನ್ನು ತಿಕ್ಕಿ ನಯಗೊಳಿಸುವುದು.

ಆವೆ
(ನಾ)
ಆವಿಗೆ, ಕುಂಬಾರನ ಒಲೆ, ಕುಲುಮೆ A potters kiln ಆವಿಗೆಯಲ್ಲಿ ಬೇಯಬೇಕು ಮಡಕೆ. ಕೋವೆಯಲ್ಲ ಕರಗಬೇಕು ಬೆಳ್ಳಿ ಬಂಗಾರ (ಗಾದೆ)

ಆವೆತ ಕಮಾನ್
(ವಿಶೇ)
ಆವಿಗೆಯ ಕಮಾನು

ಆವೆತ ಕಂಡಿ
(ನಾ)
ಆವಿಗೆಯ ಕಿಂಡಿ

ಆವೆತ ಗುರಿ
(ನಾ)
ಮಡಕೆ ಸುಡುವ ಹೊಂಡ

ಓಡ್
(ನಾ)
ಓಡು, ಹಂಚು ಮಡಕೆಯ ಚೂರು.


logo