logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಹಲಗಣೆ
ಮರದ ಗೂಟ (ಸರಳು) ಗಳಿರುವ ದೊಡ್ಡ ಕಿಟಕಿ.

ಹಲ್ಗತ್ತಿ
ಗರಗಸದಂತೆ ಹಲ್ಲುಗಳಿರುವ ಗದ್ದೆಕೊಯ್ಯಲು ಉಪಯೋಗಿಸುವ ಕತ್ತಿ, ಹಲ್ಲುಗತ್ತಿ.

ಹಲಗೆ
ಮರದ ತೆಳುವಾದ ಚಪ್ಪಟೆಯಾದ ಭಾಗ (ಹಾಳೆ).

ಹಲಗೆಹಾಸು
ಮನೆಯ ಗೋಡೆಯ ಮೇಲೆ ಹಲಗೆಗಳನ್ನಿಟ್ಟು ಮಾಡಿದ ಅಟ್ಟ.

ಹಲಸು
ಒಂದು ರೀತಿಯ ದೊಡ್ಡ ಹಣ್ಣು ಬಿಡುವ ಕಾಡಿನ ಮರ, ಸಿಹಿಯಾಗಿರುವ ಇದರ ಹಣ್ಣು ಮನುಷ್ಯರಂತೆ, ಜಾನುವಾರುಗಳು ಮತ್ತು ಮಂಗಗಳಿಗೂ ತುಂಬಾ ಪ್ರಿಯ.

ಹಲರಿ
ಬಾಯಿಗೆ ಬಂದಂತೆ ಮಾತಾಡುವುದು, ಕನವರಿಸು.

ಹಲ್ಕ
ನೀತಿಗೆಟ್ಟವ್ಞ, ನೀಚವ್ಯಕ್ತಿ, ಕೆಟ್ಟ ಮಾತುಗಳನ್ನಾಡುವವ.

ಹಲ್ಕಟ್ಟು
ಹಲ್ಕ, ನೀಚ, ಪೋಕರಿ, ಲುಚ್ಛ, ಜವಾಬ್ಧಾರಿಯಿಲ್ಲದವನು.

ಹಲ್ಮಟ್ಟೆಕಚ್ಚು
ಸಿಟ್ಟಿನಿಂದ ಹಲ್ಲು ಕಡಿಯುವುದು

ಹಲ್ಮಟ್ಟೆಕಚ್ಚು
ಮೇಲಿನ ಸಾಲಿನ ಹಲ್ಲುಗಳಿಂದ ಕೆಳತುಟಿಯನ್ನು ಕಚ್ಚಿ ಹೆದರಿಸುವುದು.


logo