logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಚಾಣ
ಉಳಿ, ಕಬ್ಬಿಣ ಕತ್ತರಿಸುವ/ಲೋಹವನ್ನು ಕತ್ತರಿಸುವ/ಕಲ್ಲನ್ನು ನಯನಾಗಿ ಕೆತ್ತುವ ದೊಡ್ಡ ಉಳಿ.

ಚಾಣಕ್ಕಿ
ಮೈನಾ, ಉಣ್ಣೆಗೊರವ, ಹಾರುವಾಗ ರೆಕ್ಕೆಯಲ್ಲಿ ಬಿಳಿ ಬಣ್ಣ ಕಾಣುವ ಹಕ್ಕಿ.

ಚಾಣಾಕ್ಷ
ಬುದ್ಧಿವಂತ, ಕುಶಲಿ, ಅನುಭವಿ.

ಚಾಣಾಕ್ಷತನ
ಬುದ್ಧಿವಂತಿಕೆ, ಸೂಕ್ಷ್ಸದೃಷ್ಟಿ, ವ್ಯವಹಾರ ಕುಶಲತೆ.

ಚಾತಿ
ಬುದ್ಧಿವಂತಿಕೆ, ಶಕ್ತಿ, ಬಲ.

ಚಾಪೆ
ಮಂದಲಿಗೆ, ಈಚಲಗರಿ/ಹುಲ್ಲಿನ ಕಡ್ಡಿಯಿಂದ ಹೆಣೆದ ನೆಲಹಾಸು.

ಚಾಪು
ಪ್ರಭಾವ

ಚಾಪು
ಕೋವಿಯ ಕುದುರೆ.

ಚಾರೆ
ಬೈನೆ ಮರದ ಹಗ್ಗ.

ಚಾಲತಿ
ರೂಢಿ, ಬಳಕೆಯಲ್ಲಿರುವ.


logo