logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಗಜ್ಜುಗ
ಆಟವಾಡಲು ಬಳಸುವ ಬೀಜ, ಒಂದು ಬಳ್ಳಿಯ ಕಾಯಿ.

ಗಟವಾಣಿ
ಗಟ್ಟಿಗಿತ್ತಿ, ಧೈರ್ಯವಂತೆ, ಬಜಾರಿ, ಜಗಳಗಂಟಿ, ಬಾಯ್ಬಡುಕಿ.

ಗಟ್ಟ
ಘಟ್ಟ, ಪರ್ವತ, ಬೆಟ್ಟ

ಗಟ್ಟ
ಹಂತ.

ಗಟ್ಟಿಕುಳ
ಹಣವಂತ, ಶ್ರೀಮಂತ ಕುಲ, ಹುಟ್ಟಿನಿಂದಲೇ ಸಿರಿವಂತರು.

ಗಟ್ಟಿಗ
ಶೂರ, ಸಮರ್ಥ, ಚತುರ, ಅನುಭವಸ್ಥ, ನಿಪುಣ.

ಗಟ್ಟಿಗತನ
ಶೂರತನ, ಎದೆಗಾರಿಕೆ.

ಗಟ್ಟಿಗಿತ್ತಿ
ಗಟವಾಣಿ, ಶೂರೆ, ಶಕ್ತೆ.

ಗಟ್ಟಿಬರುವುದು
ಬಾಳಿಕೆ ಬರುವುದು, ತಡೆತ ಬರುವುದು.

ಗಟ್ಟಿಮಾಡು
ಕಂಠಪಾಟ ಮಾಡು, ಭದ್ರಗೊಳಿಸು


logo