logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಗಂಡಾಳು
ಗಂಡುಕೂಲಿ ಆಳು, ಕೂಲಿ ಮಾಡುವ ಗಂಡಸು.

ಗಂಡ್ ಗತ್ತಿ
ಇಬ್ಬಾಯ್ ಕತ್ತಿ, ಎರಡು ಮಗ್ಗುಲ್ಲೂ ಅಲಗು ಇರುವ ಕತ್ತಿ.

ಗಂಡಿ
ಕಂಡಿ, ಸಂದು, ರಂದ್ರ, ನುಸುಳಲು ಸಾಧ್ಯವಾಗುವಂತಹ ಜಾಗ.

ಗಂಡಿ ಅಡ್ಕು
ಜಾನುವಾರುಗಳ ಬೇಲಿಯ ಕಂಡಿಯನ್ನು ನುಗ್ಗದಂತೆ ಅಡ್ಡಕಟ್ಟುಹಾಕು

ಗಂಡಿ ಅಡ್ಕು
ಕಂಡಿಯು ಮುಚ್ಚುವಂತೆ ಮುಳ್ಳಿನ ಗಿಡಗಂಟಿಗಳಿಂದ ಅಡಕುವುದು.

ಗಂಡು
ಪುರುಷ,ಗಂಡಸು, ಮದುವೆಯ ವರ.

ಗಂಡುತನ
ಗಂಡಸ್ತನ.

ಗಂಡುಬೀರಿ
ಗಂಡುತನವನ್ನು ತೋರುವವಳು, ಹೆಣ್ಣುತನವನ್ನು ಬಿಟ್ಟು ವ್ಯವಹರಿಸುವವಳು.

ಗಂಡುಬೀರ್ತನ
ಅತಿ ದಿಟ್ಟತನ, ಗಂಡುಬೀರಿ.

ಗಂಡೆದೆ
ಎದೆಗಾರಿಕೆ, ಧೈರ್ಯ ತೋರುವಿಕೆ.


logo