logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಗಣಬರು
ದೇವರು ಮೈಮೇಲೆ ಬರು, ಆವೇಶಕ್ಕೊಳಗಾಗು.

ಗಣಮಗ
ಗಣಬರಿಸಿಕೊಳ್ಳುವ ವ್ಯಕ್ತಿ.

ಗಣಲೆ
ತೊಡೆ ಅಥವಾ ತೋಳಿನ ಸಂಧಿ ಏಳುವ ನೋವಿನ ಗಡ್ಡೆ, ಉಡುಚು.

ಗಣಿಕೆ
ಗಂಟು, ಗುಣಿಕೆ, ಕುಣಿಕೆ.

ಗಣ್ಸು
ಗಂಡಸು, ಪುರುಷ.

ಗಣೆ
ಬಟ್ಟೆ ನೇತುಹಾಕಲು ಬಳಸುವ ಬಿದಿರಿನ ಗಳ.

ಗಣೇಶನ ಹಬ್ಬ
ಪಾಯಸ, ಶಾವಿಗೆ, ಕಾಯಿಹಾಲು ಮಾಡಿ ಎಡೆಯಿಡುವ ಹಬ್ಬ.

ಗತಕಾಲ
ಹಿಂದಿನ ಕಾಲ, ಕಳೆದಕಾಲ.

ಗತಿ
ಸ್ಥಿತಿ, ಅವಸ್ಥೆ.

ಗತಿಕಾಣ್ಸು
ಬುದ್ಧಿಕಲಿಸು, ಸರಿದಾರಿಗೆ ತರು, ಹಿಡಿತಕ್ಕೆ ತರು, ಉತ್ತರ ಕ್ರಿಯೆ ಮಾಡು (ನಿಂಗೊಂದು ಗತಿ ಕಾಣ್ಸದಿದ್ರೆ ನೋಡು).


logo